ಕರ್ನಾಟಕ

karnataka

ETV Bharat / bharat

ಕಲಾಕ್ಷೇತ್ರ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತಡರಾತ್ರಿವರೆಗೂ ವಿದ್ಯಾರ್ಥಿಗಳ ಪ್ರತಿಭಟನೆ

ಲೈಂಗಿಕ ಕಿರುಕುಳ ನೀಡುತ್ತಿದ್ದ ನೃತ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚೆನ್ನೈನಲ್ಲಿರುವ ಕಲಾಕ್ಷೇತ್ರ ಫೌಂಡೇಶನ್‌ನ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.

protest
ಪ್ರತಿಭಟನೆ

By

Published : Mar 31, 2023, 12:58 PM IST

ಚೆನ್ನೈ: ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಿಕ್ಷಕ ಮತ್ತು ಇತರೆ ಮೂವರು ರೆಪರ್ಟರಿ ಸದಸ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಮಿಳುನಾಡಿನ ಚೆನ್ನೈನಲ್ಲಿರುವ ಕಲಾಕ್ಷೇತ್ರ ಫೌಂಡೇಶನ್‌ನ ಉನ್ನತ ಕಲೆ ಮತ್ತು ಸಾಂಸ್ಕೃತಿಕ ಅಕಾಡೆಮಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಗುರುವಾರ ನಡೆದ ಧರಣಿಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

  1. ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಿನ್ನೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಪ್ರತಿಭಟನೆಯು ರಾತ್ರಿಯಿಡೀ ಮುಂದುವರೆಯಿತು, ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದಲೇ ಈ ಕುರಿತಾದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
  2. ಖ್ಯಾತ ಕರ್ನಾಟಕ​ ಸಂಗೀತಗಾರ ಟಿ.ಎಂ.ಕೃಷ್ಣ ಅವರು ಸಹ ಪ್ರತಿಭಟನೆಗೆ ಸಾಥ್​ ನೀಡಿ, ಆಡಳಿತ ಮಂಡಳಿಯು ಕೂಡಲೇ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುಬೇಕು ಎಂದು ಒತ್ತಾಯಿಸಿದ್ದಾರೆ. ಕಲಾಕ್ಷೇತ್ರ ಫೌಂಡೇಶನ್ ಅಧ್ಯಕ್ಷ ಎಸ್.ರಾಮದೊರೈ ಅವರಿಗೆ ಪತ್ರ ಬರೆದ ಕೃಷ್ಣ, ಶಿಕ್ಷಕರ ವಿರುದ್ಧ ಹಲವಾರು ವಿದ್ಯಾರ್ಥಿನಿಯರು ಮಾಡಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಲೇಖಕಿ ಕೊಟ್ರವಾಯಿ, ಗಾಯಕಿ ಚಿನ್ಮಯಿ ಮತ್ತು ನರ್ತಕಿ ಅನಿತಾ ರತ್ನಂ ಅವರು ಸಹ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಾರೆ. ಜೊತೆಗೆ, ಹೆಚ್ಚಿನ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ.
  3. ಪ್ರತಿಭಟನೆಯ ನಡುವೆಯೇ ಕಲಾಕ್ಷೇತ್ರ ಫೌಂಡೇಶನ್ ತನ್ನ ರುಕ್ಮಿಣಿ ದೇವಿ ಫೈನ್ ಆರ್ಟ್ಸ್ ಕಾಲೇಜ್ ಅನ್ನು ಏಪ್ರಿಲ್ 6 ರವರೆಗೆ ಮುಚ್ಚುವುದಾಗಿ ಘೋಷಿಸಿದೆ. ಕಾಲೇಜಿನ ಪ್ರಾಂಶುಪಾಲರು ಹೊರಡಿಸಿದ ಪ್ರಕಟಣೆಯಲ್ಲಿ, ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಅನ್ನು ಎರಡು ದಿನಗಳಲ್ಲಿ ಖಾಲಿ ಮಾಡುವಂತೆ ತಿಳಿಸಿದ್ದಾರೆ.
  4. ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ ಅವರು ಕ್ಯಾಂಪಸ್‌ಗೆ ರಹಸ್ಯ ಭೇಟಿ ನೀಡಿದ ಒಂದು ದಿನದ ನಂತರ ಪ್ರತಿಭಟನೆ ಭುಗಿಲೆದ್ದಿದೆ. ಶರ್ಮಾ ಅವರು ತಿರುವನ್ಮಿಯೂರ್ (ಚೆನ್ನೈ) ನಲ್ಲಿರುವ ಸಂಸ್ಥೆಯಲ್ಲಿ ಮೂರು ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದರು.
  5. ಸಂಸ್ಥೆಯ ನಿರ್ದೇಶಕ ರಾಮಚಂದ್ರನ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆರೋಪಿ ಶಿಕ್ಷಕ ಶಾಲೆಯಲ್ಲಿರುವ ಕ್ಯಾಂಪಸ್‌ನಲ್ಲಿ ಮುಕ್ತವಾಗಿ ನಡೆದಾಡುವಾಗ ನಮಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
  6. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲಾಕ್ಷೇತ್ರದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು, "ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನ ಮೌಲ್ಯಮಾಪನ ಮಾಡಲಾಗಿದೆ. ಫೌಂಡೇಶನ್‌ನಲ್ಲಿ ಅಹಿತಕರ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗುವುದಿಲ್ಲ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ" ಎಂದು ಹೇಳಿದೆ.

ABOUT THE AUTHOR

...view details