ಕೈಥಲ್:ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ 10 ಜನರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೈಥಲ್ದ ಪುಂಡ್ರಿ ಪೇಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮದುವೆ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು, 8 ಮಂದಿಗೆ ಗಂಭೀರ ಗಾಯ - ವಾಹನಗಳು ಮುಖಾಮುಖಿ ಡಿಕ್ಕಿ
ವಾಹನಗಳು ಎರಡು ಪರಸ್ಪರ ಡಿಕ್ಕಿಯಾಗಿ ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದ 10 ಜನರ ಪೈಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹರಿಯಾಣದ ಕೈಥಲ್ ನಗರದಲ್ಲಿ ನಡೆದಿದೆ.
![ಮದುವೆ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರ ಸಾವು, 8 ಮಂದಿಗೆ ಗಂಭೀರ ಗಾಯ kaithal-road-accident-four-people-died](https://etvbharatimages.akamaized.net/etvbharat/prod-images/768-512-13774341-thumbnail-3x2-road-accident.jpg)
ರಸ್ತೆ ಅಪಘಾತ
ಎರಡೂ ವಾಹನಗಳು ಮದುವೆ ಸಮಾರಂಭ ಮುಗಿಸಿ ಬರುತ್ತಿದ್ದವು ಎಂದು ಹೇಳಲಾಗುತ್ತಿದ್ದು, ಗೋಚರವಾಗದ ಕಾರಣ ಪರಸ್ಪರ ಡಿಕ್ಕಿಯಾಗಿವೆ. ಅಪಘಾತದಲ್ಲಿ 10 ಜನರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನು ಓದಿ-ಸಿಎಂ ಯೋಗಿ ಅದಿತ್ಯನಾಥ್, ದೇವೇಂದ್ರ ತಿವಾರಿಗೆ ಜೀವ ಬೆದರಿಕೆ: ಹೆಸರು ವಿಳಾಸ ಸಮೇತ ಪತ್ರ ಕಳುಹಿಸಿದ ಭೂಪ