ಉಜ್ಜಯಿನಿ( ಮಧ್ಯಪ್ರದೇಶ):ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯ ಅವರು ಉಜ್ಜಯಿನಿಯ ಮಹಾಕಾಳ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯನ ಮೇಲೆ ಕಳ್ಳಸಾಗಣೆ ಆರೋಪ ಮಾಡಿದ್ದಾರೆ.
ಬಂಗಾಳ ಸಿಎಂ ಅಳಿಯ ಗೋವು - ಕಲ್ಲಿದ್ದಲು ಕಳ್ಳಸಾಗಣೆದಾರ: ಕೈಲಾಶ್ ವಿಜಯ್ ವರ್ಗಿಯಾ ಆರೋಪ - ಬಂಗಾಳ ಸಿಎಂ ಅಳಿಯ ಗೋವು-ಕಲ್ಲಿದ್ದಲು ಕಳ್ಳಸಾಗಾಟಗಾರ ಎಂದ ಕೈಲಾಶ್ ವಿಜಯ್ ವರ್ಗಿಯ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯನ ಮೇಲೆ ಕಳ್ಳಸಾಗಣೆ ಆರೋಪ ಮಾಡಿದ್ದಾರೆ.
ಇನ್ನು ಈ ಹಿಂದೆ, ಶೀಘ್ರದಲ್ಲೇ 41 ಟಿಎಂಸಿ ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಕೈಲಾಶ್ ವಿಜಯ ವರ್ಗಿಯಾ ಬಂಗಾಳದಲ್ಲಿ ಹೇಳಿಕೆ ನೀಡಿದ್ದರು. ಆದರೆ, ಈ ಬಗ್ಗೆ ಉಜ್ಜಯಿನಿಯಲ್ಲಿ ಪ್ರಶ್ನಿಸಿದಾಗ, "41 ಶಾಸಕರು ಬಿಜೆಪಿಗೆ ಎಷ್ಟು ದಿನ ಸೇರುತ್ತಾರೆ? ಎಲ್ಲರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ" ಎಂದು ಹೇಳಿದರು. ಈ ಸಮಯದಲ್ಲಿ, ಮಮತಾ ಬ್ಯಾನರ್ಜಿಯ ಸೋದರಳಿಯನನ್ನು ಹಸು ಮತ್ತು ಕಲ್ಲಿದ್ದಲು ಕಳ್ಳಸಾಗಣೆದಾರ ಎಂದು ಆರೋಪಿಸಿದರು.
‘ಯಾರ ಚಿತ್ರಣ ಉತ್ತಮವಾಗಿರುತ್ತದೆ ಎಂಬುದನ್ನು ನೋಡಿ ಬಿಜೆಪಿಗೆ ಸೇರಿಸಲಾಗುವುದು. ಭಾರತೀಯ ಜನತಾ ಪಕ್ಷದಲ್ಲಿ ಎಲ್ಲರಿಗೂ ಪ್ರವೇಶವಿಲ್ಲ. ಇನ್ನು ಬಂಗಾಳದ ಆಹಾರ ಸಚಿವರು, ಹಡಗುಗಳ ಮೂಲಕ ಅಕ್ಕಿ ಮಾರಾಟ ಮಾಡಿದ್ದಾರೆ. ಅವರು ಬಿಜೆಪಿ ಸೇರ್ಪಡೆ ಗೆ ಇಚ್ಛಿಸುತ್ತಿದ್ದಾರೆ. ಆದರೆ, ಉತ್ತಮರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ' ಎಂದಿದ್ದಾರೆ.