ಕರ್ನಾಟಕ

karnataka

ETV Bharat / bharat

ಪಕ್ಷದ ಸೋಲಿನ ಬಳಿಕ ಎಚ್ಚೆತ್ತ ಬಿಆರ್​ಎಸ್​.. ಮೊದಲಿನ ಟಿಆರ್​ಎಸ್​​​​​​​​ ಹೆಸರು ಮರು ನಾಮಕರಣ ಮಾಡುವಂತೆ ಮನವಿ

ಈಗಿನ ಬಿಆರ್​ಎಸ್​ ಅನ್ನು ಟಿಆರ್​ಎಸ್​ ಎಂದು ಬದಲಾಯಿಸುವ ವಿಷಯವನ್ನು ಹಿರಿಯ ನಾಯಕ ಕಡಿಯಂ ಶ್ರೀಹರಿ ಅವರು ಪ್ರಸ್ತಾಪಿಸಿದ್ದಾರೆ.

ಹಿರಿಯ ನಾಯಕ ಕಡಿಯಂ ಶ್ರೀಹರಿ
ಹಿರಿಯ ನಾಯಕ ಕಡಿಯಂ ಶ್ರೀಹರಿ

By ETV Bharat Karnataka Team

Published : Jan 11, 2024, 8:16 PM IST

ವರಂಗಲ್​ (ತೆಲಂಗಾಣ) :ಕಳೆದ ವರ್ಷ ನವೆಂಬರ್​ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಪಕ್ಷ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಆರ್​ಎಸ್​ ಭರ್ಜರಿ ತಯಾರಿ ನಡೆಸುತ್ತಿದೆ. ಆದರೆ, ಈ ಮಧ್ಯೆ ಬಿಆರ್​ಎಸ್​ ಎಂಬ ಹೆಸರನ್ನು ಬದಲಾಯಿಸುವಂತೆ ಪಕ್ಷದೊಳಗೆ ಕೂಗು ಎದ್ದಿದೆ.

ಬುಧವಾರ ವಾರಂಗಲ್​ನಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್​ ಅವರ ಸಮ್ಮುಖದಲ್ಲಿ ನಡೆದ ಲೋಕಸಭಾ ಕ್ಷೇತ್ರದ ಪೂರ್ವಸಿದ್ಧತಾ ಸಭೆಯಲ್ಲಿ ಬಿಆರ್‌ಎಸ್‌ನ ಹಿರಿಯ ನಾಯಕ ಕಡಿಯಂ ಶ್ರೀಹರಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಈ ಹಿಂದೆ ಇದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಎಂಬ ಹೆಸರನ್ನು ಮತ್ತೆ ಪಕ್ಷಕ್ಕೆ ನಾಮಕರಣ ಮಾಡಿ ಜನರ ಬಳಿಗೆ ಹೋಗ ಬೇಕಾಗಿದೆ ಎಂದು ಬಹುತೇಕ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ನಾವು ತೆಲಂಗಾಣ ಪಕ್ಷವಾಗಿ ಜನರಲ್ಲಿ ಗಟ್ಟಿಯಾದ ಗುರುತನ್ನು ಹೊಂದಿದ್ದೇವೆ. ಪಕ್ಷದ ಹೆಸರಿನಲ್ಲಿ ತೆಲಂಗಾಣವನ್ನು ತೆಗೆದು ಹಾಕಿ ಭಾರತ ಎಂದು ಸೇರಿಸಿರುವುದು ರಾಜ್ಯ ಜನರ ಭಾವನೆಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತ ತಮ್ಮದಲ್ಲ ಎಂಬ ಭಾವನೆಯನ್ನು ಜನರು ಹೊಂದಿದ್ದಾರೆ. ಪಕ್ಷದ ಹೆಸರನ್ನು ಬದಲಾಯಿಸಿದ್ದರಿಂದ ಜನರಲ್ಲಿ ಭಾವನೆ ಇಲ್ಲದೇ ನಮ್ಮ ಪಕ್ಷ ಮತಗಳನ್ನು ಕಳೆದುಕೊಂಡಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ. ಬಿಆರ್​ಎಸ್ ಆದ ನಂತರ ಹೊಂದಾಣಿಕೆ ಇಲ್ಲ ಎಂಬುದು ಪಕ್ಷದ ವರಿಷ್ಠರಲ್ಲಿದೆ. ಕ್ಷೇತ್ರದ ಪ್ರವಾಸದ ವೇಳೆ ಬಹುತೇಕ ಕಾರ್ಯಕರ್ತರು, ಜನರು ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಪಕ್ಷಕ್ಕೆ ವರದಾನವಾಗಿರುವ ತೆಲಂಗಾಣದ ಭಾವನೆಯನ್ನು ಕಸಿದುಕೊಳ್ಳಬೇಡಿ. ಟಿಆರ್‌ಎಸ್‌ಗೆ ಮರಳುವುದು ಒಳ್ಳೆಯದು. ಇದು ಬಹುತೇಕ ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯವಾಗಿದೆ.

ರಾಷ್ಟ್ರಮಟ್ಟದ ರಾಜಕೀಯದಲ್ಲಿ 'ಬಿಆರ್‌ಎಸ್‌' ಇರಬೇಕಾದರೆ. ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ರಾಜ್ಯ ರಾಜಕಾರಣದಲ್ಲಿ 'ಟಿಆರ್‌ಎಸ್‌' ಅನ್ನು ಮುನ್ನೆಲೆಗೆ ತರುವ ಬಗ್ಗೆ ಯೋಚಿಸಬೇಕು. ಇದರಲ್ಲಿ ಕಾನೂನು ಅಂಶಗಳಿದ್ದರೆ ಮಾಜಿ ಸಂಸದ ವಿನೋದ್ ಕುಮಾರ್ ಹಾಗೂ ಸಂಬಂಧಪಟ್ಟ ತಜ್ಞರೊಂದಿಗೆ ಚರ್ಚಿಸಸುವುದು ಉತ್ತಮವಾಗಿದೆ. ಈ ವಿಚಾರವನ್ನು ಆದ್ಯತೆ ಮೇರೆಗೆ ಕೆಸಿಆರ್ ಅವರ ಗಮನಕ್ಕೆ ತರಬೇಕು ಎಂದು ಕಡಿಯಂ ಶ್ರೀಹರಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ :ಪವನ್ ಕಲ್ಯಾಣ್ ಭೇಟಿಯಾದ ಅಂಬಟಿ ರಾಯುಡು; ವೈಎಸ್​ಆರ್​ಸಿಪಿ ತೊರೆಯಲು ಕಾರಣ ತಿಳಿಸಿದ ಮಾಜಿ ಕ್ರಿಕೆಟಿಗ

ABOUT THE AUTHOR

...view details