ಗ್ವಾಲಿಯರ್(ಮಧ್ಯಪ್ರದೇಶ):ಕೇಂದ್ರ ವಿಮಾನಯಾನ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ತಾವು ಹಾಕಿಕೊಂಡಿದ್ದ ಮಾಸ್ಕ್ ತೆಗೆದು ಮಾಜಿ ಸಚಿವರೊಬ್ಬರಿಗೆ ಹಾಕುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ನ ಕುಲದೇವಿ ಮಂದಿರ ಮಾತಾ ದೇಗುಲದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆಯಿತು.
ಸಚಿವ ಸಿಂಧಿಯಾ ಜೊತೆ ದೇಗುಲ ಪ್ರವೇಶ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವ ಅನುಪ್ ಮಿಶ್ರಾ ಮಾಸ್ಕ್ ಹಾಕಿಕೊಂಡಿರಲಿಲ್ಲ. ಇದನ್ನು ಗಮನಿಸಿದ ಸಿಂಧಿಯಾ ತಕ್ಷಣವೇ ತಾವು ಧರಿಸಿದ್ದ ಎರಡು ಮಾಸ್ಕ್ಗಳ ಪೈಕಿ ಒಂದನ್ನು ತೆಗೆದು ಅವರಿಗೆ ತೊಡಿಸಿದರು.