ನವದೆಹಲಿ:ಭಾನುವಾರ ಇಂಗ್ಲೆಂಡ್ನಲ್ಲಿ ನಡೆದ 'ಲೌಬರೋ ಇಂಟರ್‌ನ್ಯಾಶನಲ್ ಅಥ್ಲೆಟಿಕ್ಸ್ ಮೀಟ್'ನಲ್ಲಿ ಜ್ಯೋತಿ ಯರ್ರಾಜಿ ಅವರು ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಮಹಿಳೆಯರ 100 ಮೀಟರ್ ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 22 ವರ್ಷದ ಆಂಧ್ರದ ಅಥ್ಲೀಟ್, ಮೇ 10ರಂದು ಲಿಮಾಸೋಲ್‌ನಲ್ಲಿ ನಡೆದ ಸೈಪ್ರಸ್ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ 13.23 ಸೆಕೆಂಡ್‌ಗಳಲ್ಲಿ ಜಯಗಳಿಸಿ ಹೊಸ ಮೈಲುಗಲ್ಲು ತಲುಪಿದ್ದರು. ಈಗ ಅವರು ಗಳಿಸಿದ್ದ 13.23ರ ರಾಷ್ಟ್ರೀಯ ದಾಖಲೆಯನ್ನು ಮತ್ತೆ ಮುರಿದು 13.11 ಸೆಕೆಂಡ್‌ಗಳಲ್ಲಿ ಓಡಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.
ಯರ್ರಾಜಿ ಅವರು ಭುವನೇಶ್ವರದಲ್ಲಿರುವ ರಿಲಯನ್ಸ್ ಫೌಂಡೇಶನ್ ಒಡಿಶಾ ಅಥ್ಲೆಟಿಕ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಜೋಸೆಫ್ ಹಿಲಿಯರ್ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಅವರು 13.09 ಸೆಕೆಂಡ್ ಗಳಿಸಿದ್ದರು. ಆದರೆ ಗಾಳಿಯ ವೇಗ +2.1 ಮೀ/ಸೆಕೆಂಡಿಗೆ ಅನುಮತಿಸಲಾದ +2.0 ಮೀ/ಸೆಕೆಂಡ್‌ಗಿಂತ ಹೆಚ್ಚಾಗಿದ್ದರಿಂದ ಅದನ್ನು ರಾಷ್ಟ್ರೀಯ ದಾಖಲೆಯಾಗಿ ಪರಿಗಣಿಸಲಾಗಿಲ್ಲ.