ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜ್ಯೂನಿಯರ್ ಆರ್ಟಿಸ್ಟ್ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಶಾದ್‌ನಗರ ರೈಲು ನಿಲ್ದಾಣದಲ್ಲಿ ನಡೆದಿದೆ. ಮೃತಳನ್ನು ಆಂಧ್ರಪ್ರದೇಶದ ಕಡಪ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ.
ಜ್ಯೋತಿರೆಡ್ಡಿ(28) ಎಂಬುವರು ಮೃತಪಟ್ಟ ಯುವತಿ. ಹೈದರಾಬಾದ್ನ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಲೇ ಜ್ಯೋತಿ ಚಿತ್ರರಂಗದಲ್ಲೂ ಜೂನಿಯರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದರು ಎಂದು ಹೆಚ್ಡಿಎಫ್ಸಿ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಪ ನಗರದ ಸಿನಿಮಾ ಸ್ಟ್ರೀಟ್ ಎಂಬ ಪ್ರದೇಶದವರಾದ ಅವರು ಹೈದರಾಬಾದ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಕ್ರಾಂತಿ ಹಬ್ಬಕ್ಕಾಗಿ ಸ್ವಂತ ಊರಿಗೆ ತೆರಳಿದ್ದ ಆಕೆ, ರೈಲಿನಲ್ಲಿ ಹೈದರಾಬಾದ್ನ ಕಾಚಿಗುಡ ರೈಲ್ವೆ ಸ್ಟೇಷನ್ಗೆ ಪ್ರಯಾಣ ಮಾಡುತ್ತಿದ್ದರು. ಶಾದ್‌ನಗರ ರೈಲ್ವೆ ಸ್ಟೇಷನ್ ಬಳಿ ರೈಲು ನಿಂತಿತ್ತು. ಇದನ್ನೇ ಕಾಚಿಗುಡ ಎಂದು ಭಾವಿಸಿದ ಜ್ಯೋತಿ, ರೈಲಿನಿಂದ ಕೆಳಗೆ ಇಳಿದಿದ್ದಳು.