ಬೆಂಗಳೂರು: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಕಿರಿಯ ಸಹಾಯಕರು (ಅಗ್ನಿ ಸೇವೆ) - 73
- ಕಿರಿಯ ಸಹಾಯಕರು (ಆಫೀಸ್) - 2
- ಹಿರಿಯ ಸಹಾಯಕರು (ಎಲೆಕ್ಟ್ರಾನಿಕ್ಸ್) - 25
- ಹಿರಿಯ ಸಹಾಯಕರು (ಅಕೌಂಟ್ಸ್) -19
ವಿದ್ಯಾರ್ಹತೆ:ಕಿರಿಯ ಸಹಾಯಕರು (ಅಗ್ನಿ ಸೇವೆ) ಹುದ್ದೆಗೆ ಅಭ್ಯರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿ ಉತ್ತೀರ್ಣರಾಗಿರಬೇಕು. ಕಿರಿಯ ಸಹಾಯಕರು (ಆಫೀಸ್) ಯಾವುದೇ ವಿಷಯದಲ್ಲಿ ಪದವಿ. ಹಿರಿಯ ಸಹಾಯಕರು (ಎಲೆಕ್ಟ್ರಾನಿಕ್ಸ್) ಹುದ್ದೆಗಳಿಗೆ ಎಲೆಕ್ಟ್ರಾನಿಕ್ಸ್. ಟೆಲಿಕಮ್ಯೂನಿಕೇಷನ್, ರೇಡಿಯೋ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ ಮತ್ತು ಹಿರಿಯ ಸಹಾಯಕರು (ಅಕೌಂಟ್ಸ್) ವಾಣಿಜ್ಯ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ ವಯೋಮಿತಿ 30 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.