ಹೈದ್ರಾಬಾದ್(ತೆಲಂಗಾಣ) :ನ್ಯಾಯಾಂಗದ ಪ್ರಕರಣಗಳಲ್ಲಿ ತ್ವರಿತ ಪರಿಹಾರಕ್ಕೆ ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ. ಹೈದ್ರಾಬಾದ್ನ ಗಚಿಬೌಲಿಯಲ್ಲಿ ನಡೆದ ತೆಲಂಗಾಣದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ಹಾಗೆ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯೂ ಅಧಿಕವಾಗಬೇಕು. ಇತ್ತೀಚಿಗೆ ತೆಲಂಗಾಣದ ಹೈಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅದೇ ರೀತಿಯಾಗಿ ಬಾಕಿ ಉಳಿದ ಪ್ರಕರಣಗಳು ಮುಂದಿನ ಎರಡು ವರ್ಷದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದರು.
ಹೈದ್ರಾಬಾದ್ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆಯಾಗಿದೆ. ವಿವಾದಗಳನ್ನು ಇತ್ಯರ್ಥ ಪಡಿಸಲು ಈ ಕೇಂದ್ರ ಅನುಕೂಲವಾಗಲಿದೆ. ಇಂತಹ ಕೇಂದ್ರ ತಮ್ಮ ರಾಜ್ಯಗಳಲ್ಲೂ ಆರಂಭವಾಗಬೇಕೆಂದು ಅನೇಕ ಜನರು ಬಯಸುತ್ತಾರೆ. ತೆಲಂಗಾಣದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಇತ್ತೀಚೆಗೆ ಅನೇಕ ರಾಜ್ಯಗಳ ಸರ್ಕಾರಿ ನೌಕರರ ಸಂಖ್ಯೆಯನ್ನು ಕಡಿತ ಮಾಡುತ್ತಿವೆ. ಇದಕ್ಕೆ ಪ್ರತಿಯಾಗಿ ಗುತ್ತಿಗೆ ನೌಕರರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಮಿಸಿಕೊಳ್ಳುತ್ತಿವೆ ಎಂದು ಸಿಜೆಐ ಬೇಸರ ವ್ಯಕ್ತಪಡಿಸಿದರು. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಹೈಕೋರ್ಟ್ನ ಮುಖ್ಯ ನಾಯಮೂರ್ತಿ ಸತೀಶ್ಚಂದ್ರ ಶರ್ಮಾ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!