ಫರೀದಾಬಾದ್:ನಿಖಿತಾ ಹತ್ಯಾಕಾಂಡ ನಡೆದು ಸರಿ ಸುಮಾರು ಐದು ತಿಂಗಳು ಕಳೆದಿವೆ. ಇಂದು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಬೇಕಾಗಿತ್ತು. ಆದ್ರೆ ಶಿಕ್ಷೆ ಪ್ರಕಟಿಸುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ಗುಂಡು ಹಾರಿಸಿ ಕೊಲೆ
26 ಅಕ್ಟೋಬರ್ 2020ರಂದು ನಿಖಿತಾ ತೋಮರ್ ಮೇಲೆ ಆರೋಪಿಗಳು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಂಧನ
ತನಿಖೆ ಕೈಗೊಂಡ ಫರೀದಾಬಾದ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎಸ್ಐಟಿಗೆ ವರ್ಗಾಹಿಸಲಾಗಿತ್ತು.
ಜಾರ್ಜ್ಶೀಟ್ ಸಲ್ಲಿಕೆ
ನಡುರಸ್ತೆಯಲ್ಲೇ ಯುವತಿ ಮೇಲೆ ಶೂಟೌಟ್ ನಡೆಸಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣ ನಡೆದು 11 ದಿನಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ನಿಖಿತಾ ತೋಮರ್ ಹತ್ಯೆ ಮಾಡಿದ ಆರೋಪಿಗಳಾದ ತೌಸಿಫ್, ರೆಹಾನ್ ಮತ್ತು ಅಜ್ರು ಎಂಬುವವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಎಸ್ಐಟಿ 25 ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು.