ನವದೆಹಲಿ:ದೇಶದ ಪ್ರಮುಖ ಸ್ಟೀಲ್ ಕಂಪನಿಗಳಲ್ಲಿ ಒಂದಾಗ ಜೆಎಸ್ಡಬ್ಲ್ಯೂ ಗ್ರೂಪ್ ಕಂಪನಿಯು ವರ್ಷದಿಂದ ವರ್ಷಕ್ಕೆ ತನ್ನ ಉತ್ಪಾದನೆಯಲ್ಲಿ ಏರಿಕೆಯನ್ನು ದಾಖಲಿಸುತ್ತಿದೆ. ಈ ಬಾರಿ ಶೇ.21ರಷ್ಟು ಹೆಚ್ಚುವರಿ ಕಚ್ಚಾ ಉಕ್ಕು ಉತ್ಪಾದನೆಯನ್ನು ದಾಖಲಿಸಿ ಗಮನ ಸೆಳೆದಿದೆ.
ಕಳೆದ 2021ರ ಫೆಬ್ರವರಿಯಲ್ಲಿ ಒಟ್ಟಾರೆ 1.31 ಮಿಲಿಯನ್ ಟನ್ ಉತ್ಪಾದನೆ ಮಾಡಿತ್ತು. ಈ ಪ್ರಸಕ್ತ ಫೆಬ್ರವರಿಯಲ್ಲಿ 1.58 ಮಿಲಿಯನ್ ಟನ್ಗೆ ಇದರ ಉತ್ಪಾದನೆ ಅಧಿಕವಾಗಿದೆ. ಜತೆಗೆ ಫ್ಲಾಟ್-ರೋಲ್ಡ್ ಉಕ್ಕು ಉತ್ಪಾದನೆಯಲ್ಲೂ ಶೇ.25ರಷ್ಟು ಹೆಚ್ಚುವರಿ ಉತ್ಪಾದನೆ ಮಾಡಲಾಗಿದೆ. ಕಳೆದ ವರ್ಷ ಫ್ಲಾಟ್-ರೋಲ್ಡ್ನ ಉತ್ಪಾದನೆಯು 0.93 ಮಿಲಿಯನ್ ಇತ್ತು. ಈ ಬಾರಿ 1.15 ಮಿಲಿಯನ್ ಟನ್ಗೆ ಏರಿಕೆಯಾಗಿದೆ ಎಂದು ಜೆಎಸ್ಡಬ್ಲ್ಯೂ ಗ್ರೂಪ್ ಕಂಪನಿ ತಿಳಿಸಿದೆ.