ಕರ್ನಾಟಕ

karnataka

ETV Bharat / bharat

ಪವನ್​ ಕಲ್ಯಾಣ್​ ವಿಶಾಖಕ್ಕೆ ದೌಡು.. ಇಂದಿನಿಂದ ವಾರಾಹಿ ಯಾತ್ರೆಯ ಮೂರನೇ ಹಂತ ಪ್ರಾರಂಭ - ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ವಾರಾಹಿ ಯಾತ್ರೆಯ ಮೂರನೇ ಹಂತ ಇಂದಿನಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ.

JSP chief Pawan Kalyan  Varahi Yatra to roll into Visakhapatnam  JSP chief Pawan Kalyan Varahi Yatra  Varahi Yatra to roll into Visakhapatnam today  ಕೆಲವೇ ಕ್ಷಣಗಳಲ್ಲಿ ಪವನ್​ ಕಲ್ಯಾಣ್​ ವಿಶಾಖಕ್ಕೆ ದೌಡು  ವಾರಾಹಿ ಯಾತ್ರೆಯ ಮೂರನೇ ಹಂತ ಪ್ರಾರಂಭ  ನಟ ರಾಜಕಾರಣಿ ಪವನ್​ ಕಲ್ಯಾಣ್​ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್  ಮೂರನೇ ಹಂತದ ವಾರಾಹಿ ಯಾತ್ರೆಗೆ ಇಂದಿನಿಂದ ಚಾಲನೆ  ವಾರಾಹಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತ  ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ  ಮೂರನೇ ಹಂತ ಇಂದಿನಿಂದ ವಿಶಾಖಪಟ್ಟಣದಲ್ಲಿ ಆರಂಭ
ಕೆಲವೇ ಕ್ಷಣಗಳಲ್ಲಿ ಪವನ್​ ಕಲ್ಯಾಣ್​ ವಿಶಾಖಕ್ಕೆ ದೌಡು

By

Published : Aug 10, 2023, 9:23 AM IST

ವಿಶಾಖಪಟ್ಟಣಂ, ಆಂಧ್ರಪ್ರದೇಶ:ನಟ ರಾಜಕಾರಣಿ ಪವನ್​ ಕಲ್ಯಾಣ್​ ಅವರಿಂದ ನಡೆಯುತ್ತಿರುವ ವಾರಾಹಿ ಯಾತ್ರೆ ಮುಂದುವರಿಯಲಿದೆ.ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ಹಂತದ ವಾರಾಹಿ ಯಾತ್ರೆಗೆ ಇಂದಿನಿಂದ ಚಾಲನೆ ದೊರೆಯಲಿದೆ. ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಈ ಯಾತ್ರೆ ಇದೇ ತಿಂಗಳ 19ರವರೆಗೆ ಮುಂದುವರಿಯಲಿದೆ.

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ತಮ್ಮ ಈ ವಾರಾಹಿ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇಂದು ಮಧ್ಯಾಹ್ನ ಪವನ್ ಕಲ್ಯಾಣ್ ನಗರವನ್ನು ತಲುಪಲಿದ್ದು, ಸಂಜೆ 5 ಗಂಟೆಗೆ ವಿಶಾಖಪಟ್ಟಣದ ಜಗದಂಬಾ ಕೂಡಲಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ನಡೆಯುವ ಜನವಾಣಿ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಅವರು ವಿಶಾಖಪಟ್ಟಣಂ ನಿವಾಸಿಗಳಿಂದ ದೂರು ಮತ್ತುಅಹವಾಲು ಸ್ವೀಕರಿಸಲಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ ವಾರಾಹಿ ಯಾತ್ರೆಯಲ್ಲಿ ನಗರದ ಧ್ವಂಸಗೊಂಡ ಮತ್ತು ಆಕ್ರಮಿತ ಪ್ರದೇಶಗಳಿಗೆ, ಮುಖ್ಯವಾಗಿ ಗಂಗವರಂ ಬಂದರು ಮತ್ತು ಇತರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜನಸೇನಾ ಪಕ್ಷದ ಪ್ರಧಾನ ಕಾರ್ಯದರ್ಶಿ ಟಿ ಶಿವಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಎರಡು ವಾರಾಹಿ ಯಾತ್ರೆಗಳಿಗಿಂತ ವಿಶಾಖ ವಾರಾಹಿ ಯಾತ್ರೆ ವಿಭಿನ್ನವಾಗಿರಲಿದೆ. ಸುರಕ್ಷತಾ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ನಾಯಕರಿಗೆ ಸಲಹೆ ನೀಡಲಾಗುತ್ತದೆ. ಯಾತ್ರಾ ಮಾರ್ಗದಲ್ಲಿ ಕ್ರೇನ್, ಭಾರಿ ವಾಹನಗಳು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತೆಗೆ ತೊಂದರೆಯಾಗದಂತೆ ಸಹಕರಿಸುವಂತೆ ಪವನ್ ಕಲ್ಯಾಣ್ ಅವರನ್ನು ಕೋರಲಾಗಿದೆ ಎಂದು ಶಿವಶಂಕರ್​ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಪೊಲೀಸರು ನಗರದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡಿದ್ದಾರೆ. ಆದರೂ ಅವರು ಕೆಲವು ನಿರ್ಬಂಧಗಳನ್ನು ಘೋಷಿಸಿದ್ದಾರೆ. ಜನಸೇನಾ ಮುಖ್ಯಸ್ಥರ ನಿಗದಿತ ಭೇಟಿಗೆ ಕೆಲವು ದಿನಗಳ ಮೊದಲು, ಅನಕಾಪಲ್ಲಿ, ಪರವಾಡ ಮತ್ತು ನರಸೀಪಟ್ಟಣದಲ್ಲಿ ಪೊಲೀಸ್ ಕಾಯಿದೆಯ ಸೆಕ್ಷನ್ 30 ಅನ್ನು ಬಿಗಿಗೊಳಿಸಲಾಯಿತು ಎಂದು ಶಂಕರ್​ ಅವರು ಮಾಹಿತಿ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕ ಪಂಚಕರ್ಲ ರಮೇಶ್ ಬಾಬು ಹಾಗೂ ಜನಸೇನಾ ಪಕ್ಷದ ವಾರಾಹಿ ಯಾತ್ರೆ ಮಾಧ್ಯಮ ಸಮಿತಿ ಸದಸ್ಯರು ಭಾಗವಹಿಸಿದ್ದರು. ಇಂದು ನಟ-ರಾಜಕಾರಣಿ ಪವನ್​ ಕಲ್ಯಾಣ್​ ಅವರನ್ನು ಬರಮಾಡಿಕೊಳ್ಳಲು ಜೆಎಸ್‌ಪಿ ಬೆಂಬಲಿಗರು ಮತ್ತು ಅಭಿಮಾನಿಗಳ ಭಾರೀ ಗುಂಪು ವಿಶಾಖಪಟ್ಟಣಂ ವಿಮಾನ ನಿಲ್ದಾಣಕ್ಕೆ ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆ ನಟ ಪವನ್​ ಕಲ್ಯಾಣ್​ ಅವರನ್ನು ಏರ್‌ಪೋರ್ಟ್‌ನಿಂದ ಹೋಟೆಲ್‌ವರೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲು ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ:Bro movie: ₹50 ಕೋಟಿ ಕ್ಲಬ್​ ಸೇರಿದ 'ಬ್ರೋ': ಪವನ್​ ಕಲ್ಯಾಣ್​- ಸಾಯಿ ತೇಜ್​ ಕಾಂಬೋ ಹಿಟ್​

ABOUT THE AUTHOR

...view details