ನವದೆಹಲಿ: ಕೊರೊನಾ ವೈರಸ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ನಡ್ಡಾ ಹಾಗೂ ಅವರ ಕುಟುಂಬ ಕೊರೊನಾ ವೈರಸ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ಟಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಗುಣಮುಖರಾಗುವಂತೆ ಶುಭ ಹಾರೈಸಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.
ಓದಿ: ದೇಶದಲ್ಲಿ 'ಕೋವಿಶೀಲ್ಡ್' ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್!
'ಅನಾರೋಗ್ಯದ ಸಮಯದಲ್ಲಿ ನನಗೆ ಶುಭಾಶಯ, ಚೇತರಿಸಿಕೊಳ್ಳಲು ಪ್ರಾರ್ಥನೆ ಹಾಗೂ ನೈತಿಕ ಬೆಂಬಲ ಸೂಚಿಸಿರುವ ಎಲ್ಲರಿಗೂ ಧನ್ಯವಾದಗಳು. ನನ್ನ ಕುಟುಂಬದ ಸದಸ್ಯರು ಮತ್ತು ನಾನು ಈಗ ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ಡಾ. ರಣದೀಪ್ ಗುಲೇರಿಯಾ ಹಾಗೂ ಅವರ ತಂಡಕ್ಕೆ ನಾನು ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ' ಎಂದಿದ್ದಾರೆ.
ಡಿಸೆಂಬರ್ 13ರಂದು ನಡ್ಡಾ ಕೋವಿಡ್ ಸೋಂಕಿಗೊಳಗಾಗಿದ್ದರು. ಇದಕ್ಕೂ ಮೊದಲು ಅವರು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದರು ಎಂಬುದು ವಿಶೇಷ.