ಕರ್ನಾಟಕ

karnataka

ETV Bharat / bharat

ಹೈದರಾಬಾದ್‌ನಲ್ಲಿ ರಾಮೋಜಿ ರಾವ್ ಭೇಟಿಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ... - ಬಿಜೆಪಿ ಮುಖಂಡರಿಗೆ ಬಲ ತುಂಬಿದ ಜೆಪಿ ನಡ್ಡಾ

ಹೈದರಾಬಾದ್‌ನಲ್ಲಿ ರಾಮೋಜಿ ಗ್ರೂಪ್ ಅಧ್ಯಕ್ಷ ರಾಮೋಜಿ ರಾವ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಮಾಡಿದರು. ಜೊತೆಗೆ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಉಪಸ್ಥಿತರಿದ್ದರು.

Etv Bharat
Etv Bharat

By ETV Bharat Karnataka Team

Published : Oct 7, 2023, 10:16 AM IST

ಹೈದರಾಬಾದ್:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಮೋಜಿ ಗ್ರೂಪ್ ಕಂಪನಿಗಳ ಅಧ್ಯಕ್ಷ ರಾಮೋಜಿ ರಾವ್ ಅವರನ್ನು ಭೇಟಿಯಾದರು. ನಿನ್ನೆ ಹೈದರಾಬಾದ್​ಗೆ ಬಂದಿದ್ದ ಜೆಪಿ ನಡ್ಡಾ ಅವರು, ಈ ಸಭೆಗೆ ಸಂಬಂಧಿಸಿದ ಮಾಹಿತಿ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ 'ಎಕ್ಸ್' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

''ರಾಮೋಜಿ ರಾವ್ ಅವರು ದೂರದೃಷ್ಟಿಯುಳ್ಳವರಾಗಿದ್ದು, ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಅವರ ಕೆಲಸ ಸ್ಫೂರ್ತಿದಾಯಕವಾಗಿದೆ'' ಎಂದು ಜೆಪಿ ನಡ್ಡಾ ಹೇಳಿದರು. ನಡ್ಡಾ ಅವರೊಂದಿಗೆ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಉಪಸ್ಥಿತರಿದ್ದರು.

ಬಿಜೆಪಿ ಮುಖಂಡರಿಗೆ ಬಲ ತುಂಬಿದ ಜೆ.ಪಿ. ನಡ್ಡಾ:ದಕ್ಷಿಣದ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿರುವ ಭಾರತೀಯ ಜನತಾ ಪಕ್ಷ ತೆಲಂಗಾಣದಲ್ಲಿ ಅಧಿಕಾರ ಮತ್ತು ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದೆ. ಅದರ ಭಾಗವಾಗಿ, ಘಟಕೇಸರದ ವಿಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಜೆ.ಪಿ.ನಡ್ಡಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಿಜೆಪಿ ಮುಖಂಡರಿಗೆ ಬಲ ತುಂಬಿದರು. ಒಂಬತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮಾಡಿರುವ ಪ್ರಗತಿಯನ್ನು ಜನರಿಗೆ ವಿವರಿಸಿ ಎಂದು ಸಲಹೆ ನೀಡಿದರು.

ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ ಹೋರಾಟ:''ತೆಲಂಗಾಣದಲ್ಲಿ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆಗಳಿಂದ ಹಿಡಿದು ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆಗಳ ಸೋರಿಕೆಯವರೆಗೆ... ಬಿಆರ್‌ಎಸ್ ಸರ್ಕಾರದ ಆಡಳಿತ ಟೀಕೆಗೆ ಒಳಗಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 30 ಲಕ್ಷ ಯುವಕರ ಆಕಾಂಕ್ಷೆಗಳು ನುಚ್ಚುನೂರಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸರಕಾರಕ್ಕೆ ಶಾಶ್ವತ ರಜೆ ನೀಡಬೇಕು ಎಂದ ಅವರು, ದೇಶದ ಏಕೈಕ ರಾಷ್ಟ್ರೀಯ ಪಕ್ಷ ಬಿಜೆಪಿ. ಪ್ರತಿಯೊಂದು ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ ಹೋರಾಟ ನಡೆಸುತ್ತಿದೆ ಎಂದು ಜೆಪಿ ನಡ್ಡಾ ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ 9 ಲಕ್ಷ ಕೋಟಿ ಖರ್ಚು ಮಾಡಿದ ಕೇಂದ್ರ:''ಕಾಂಗ್ರೆಸ್ ಪ್ರಾದೇಶಿಕ ಆಕಾಂಕ್ಷೆ, ಅಭಿವೃದ್ಧಿಯನ್ನು ಕಡೆಗಣಿಸಿ ಪ್ರಾದೇಶಿಕ ಪಕ್ಷಗಳ ಉಗಮಕ್ಕೆ ಕಾರಣವಾಗಿದೆ. ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಆರ್‌ಜೆಡಿ, ಜೆಎಂಎಂ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ, ಶಿವಸೇನೆ, ಬಿಆರ್‌ಎಸ್, ವೈಸಿಪಿ... ಈ ಎಲ್ಲ ಪ್ರಾದೇಶಿಕ ಪಕ್ಷಗಳೂ ಕುಟುಂಬ ಪಕ್ಷಗಳಾಗಿ ಬಿಟ್ಟಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಮತ್ತು ಜಗನ್ ರೆಡ್ಡಿ ಕುಟುಂಬ, ತೆಲಂಗಾಣದಲ್ಲಿ ಕೆಸಿಆರ್, ಅವರ ಮಗ, ಮಗಳು ಮತ್ತು ಅವರ ಕುಟುಂಬಗಳ ನಿಯಂತ್ರಣದಲ್ಲಿವೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಲ್ಲಿ 9 ಲಕ್ಷ ಕೋಟಿ ಖರ್ಚು ಮಾಡಿದೆ ಎಂದು ಜೆ.ಪಿ. ನಡ್ಡಾ ವಿವರಿಸಿದರು.

ಇದನ್ನೂ ಓದಿ:ಹೂಗುಚ್ಛ ಕೊಡಲು ತಡ ಮಾಡಿದ್ದಕ್ಕೆ ಗನ್‌ಮ್ಯಾನ್‌ ಕಪಾಳಕ್ಕೆ ಹೊಡೆದ ತೆಲಂಗಾಣ ಗೃಹ ಮಂತ್ರಿ: ವಿಡಿಯೋ

ABOUT THE AUTHOR

...view details