ಹೈದರಾಬಾದ್: ಜೋಶಿಮಠ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್ಐ) ನಿರ್ದೇಶಕ ಡಾ. ರಾಮಂಚರ್ಲಾ ಪ್ರದೀಪ್ ಕುಮಾರ್ ಮಾತನಾಡಿ, ಉತ್ತರಾಖಂಡದ ಜೋಶಿಮಠ ಪ್ರದೇಶವು ಸಬ್ಸಿಡೆನ್ಸ್ ಝೋನ್ಗೆ (ಕುಸಿತದ ವಲಯ) ಒಳಪಟ್ಟಿದ್ದು, ಬಿರುಕುಗಳು ಉಂಟಾಗಲು ಹಲವು ಕಾರಣಗಳಿವೆ. ಪ್ರಸ್ತುತ, ಜೋಶಿಮಠದಲ್ಲಿ ಹಾನಿಗೊಳಗಾದ ಕಟ್ಟಡಗಳ ನೆಲಸಮ ಮತ್ತು ಪುನರ್ವಸತಿ ಜವಾಬ್ದಾರಿಯನ್ನು ಸರ್ಕಾರವು ಸಿಬಿಆರ್ಐಗೆ ವಹಿಸಿದೆ ಎಂದು ಹೇಳಿದರು. ಪ್ರದೀಪ್ ಕುಮಾರ್ ಅವರು 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದರು. ಪ್ರದೀಪ್ ಕುಮಾರ್ ಅವರು ನೀಡಿದ ವಿವರಣೆ ಇಲ್ಲಿದೆ.
ಪ್ರಶ್ನೆ: ಜೋಶಿಮಠದಲ್ಲಿ ಏಕಾಏಕಿ ಭೂಮಿ ಮತ್ತು ಕಟ್ಟಡಗಳಲ್ಲಿ ಬಿರುಕು ಮೂಡಲು ಕಾರಣಗಳೇನು..?
ಉತ್ತರ: ಈ ಪ್ರದೇಶವು ಕುಸಿತದ ವಲಯದಲ್ಲಿದೆ. ಮಳೆ ಬಿದ್ದಾಗ ಬೆಟ್ಟಗಳ ತೆಳುವಾದ ಪದರುಗಳಲ್ಲಿ ನೀರು ಸಂಗ್ರಹಗೊಂಡು ಅಲ್ಲಿನ ಗಡಸುತನ ಕಡಿಮೆಯಾಗುತ್ತದೆ. ಹಿಮನದಿಗಳು ಕರಗಿ ನೈಸರ್ಗಿಕ ನೀರಿನ ಹರಿವು ತಡೆಯುವುದರಿಂದ ಭೂಮಿಯ ಹೊರಪದರ ಕುಗ್ಗುತ್ತಿದೆ. ಇಲ್ಲಿನ ಭೂಕುಸಿತಕ್ಕೂ ಈ ಅಂಶಗಳನ್ನು ಕಾರಣಗಳಾಗಿ ಉಲ್ಲೇಖಿಸಬಹುದು
ಪ್ರಶ್ನೆ: ಉತ್ತರಾಖಂಡವು ಅನೇಕ ಬೆಟ್ಟಗಳು, ಕಣಿವೆಗಳು ಮತ್ತು ನದಿ ಜಲಾನಯನ ಪ್ರದೇಶಗಳನ್ನು ಹೊಂದಿದೆ. ಜೋಶಿಮಠದಲ್ಲಿ ಮಾತ್ರ ಯಾಕೆ ಸಮಸ್ಯೆ?
ಉತ್ತರ: ಗುಡ್ಡಗಾಡು ಪ್ರದೇಶಗಳಲ್ಲಿ ಇಂಥ ಘಟನೆಗಳು ಸಾಮಾನ್ಯ. ಇಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಎಲ್ಲರ ಗಮನ ಜೋಶಿಮಠದತ್ತ ನೆಟ್ಟಿದೆ. ವರ್ಷಾನುಗಟ್ಟಲೆ ವಸತಿ, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಅದೊಂದೇ ಕಾರಣ ಎಂದು ಹೇಳಲಾಗದು. ಸಮಸ್ಯೆಯ ಮೂಲ ಕಾರಣಗಳನ್ನು ಗುರುತಿಸುವಲ್ಲಿ ಸರ್ಕಾರಿ ಸಂಸ್ಥೆಗಳು ತೊಡಗಿವೆ.
ಪ್ರಶ್ನೆ:ಎಷ್ಟು ದೂರದವರೆಗೆ ಬಿರುಕು ಬಿಟ್ಟ ಪ್ರದೇಶಗಳು ಮತ್ತು ಕಟ್ಟಡಗಳನ್ನು ಗುರುತಿಸಲಾಗಿದೆ?