ಶ್ರೀನಗರ( ಜಮ್ಮು- ಕಾಶ್ಮೀರ): ಇತ್ತೀಚೆಗೆ ವಿಶ್ವಾದ್ಯಂತ ಭೂ ಕಂಪನದ ವರದಿಗಳನ್ನು ಕೇಳುತ್ತಲೇ ಇದ್ದೇವೆ. ಅಂಡಮಾನ್ ನಿಕೋಬಾರ್, ಈಶಾನ್ಯ ರಾಜ್ಯಗಳಿಂದ ಇಂತಹ ವರದಿಗಳು ಆಗಾಗ ಬರುತ್ತಲೇ ಇವೆ.
ಇಂದು ಜಮ್ಮು ಕಾಶ್ಮೀರ ಮತ್ತು ನೋಯ್ಡಾದಲ್ಲಿ ಭೂಕಂಪನ ಆಗಿರುವ ವರದಿ ಆಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಹೆಚ್ಚುವರಿ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲೂ ಈ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.