ಮೊರದಾಬಾದ್ (ಉತ್ತರಪ್ರದೇಶ) : ಬಿಹಾರದಿಂದ ಪಂಜಾಬ್‌ಗೆ ರೈಲಿನಲ್ಲಿ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ನಿರ್ದಿಷ್ಟ ಮಾಹಿತಿ ಮೇರೆಗೆ ಜಿಆರ್‌ಪಿ ಮತ್ತು ಮಕ್ಕಳು ಆರೈಕೆಯ ಜಂಟಿ ತಂಡ ದಾಳಿ ನಡೆಸಿದೆ. ಈ ವೇಳೆ 32 ಮಕ್ಕಳು ಸೇರಿದಂತೆ 83 ಜನರನ್ನು ಮೊರದಾಬಾದ್ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿದೆ. ಇದರಲ್ಲಿ ಏಳು ಅಪ್ರಾಪ್ತರ ಸಂಬಂಧಿಕರು ಯಾರೂ ಪ್ರಯಾಣಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಮೊರದಾಬಾದ್ ಜಿಆರ್‌ಪಿ ಎಸ್‌ಪಿ ಅಪರ್ಣ ಗುಪ್ತಾರಿಗೆ ಬಿಹಾರದಿಂದ ಪಂಜಾಬ್‌ಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ನಲ್ಲಿ ಅಪ್ರಾಪ್ತರನ್ನು ಮಾನವ ಕಳ್ಳಸಾಗಣೆ ಮೂಲಕ ಕರೆದೊಯ್ಯಲಾಗುತ್ತದೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಎಸ್‌ಪಿ ಅಪರ್ಣ ಗುಪ್ತಾ ಮಕ್ಕಳ ಆರೈಕೆ ಮತ್ತು ಜಿಆರ್‌ಪಿ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಿದ್ದರು. ಮೊರದಾಬಾದ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಏಳು ಮಕ್ಕಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.