ನವದೆಹಲಿ:ಡೆಡ್ಲಿ ವೈರಸ್ ಕೊರೊನಾ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿದಿನ ಸಾವಿರಾರು ಸೋಂಕಿತರು ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ದೇಶದ ಪ್ರಮುಖ 12 ಪ್ರತಿಪಕ್ಷಗಳು ಪ್ರಧಾನಿ ಮೋದಿಗೆ ಕೆಲವೊಂದು ಅಂಶಗಳನ್ನಿಟ್ಟುಕೊಂಡು ಪತ್ರ ಬರೆದಿವೆ.
ದೇಶದ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ಸೇರಿದಂತೆ ಪ್ರಮುಖ 8 ವಿಷಯಗಳೊಂದಿಗೆ ಈ ಪತ್ರ ಬರೆದಿವೆ.
ವಿಪಕ್ಷಗಳು ಪತ್ರದಲ್ಲಿ ತಿಳಿಸಿರುವ 8 ಅಂಶಗಳು
- ಜಾಗತಿಕ ಹಾಗೂ ದೇಶೀಯವಾಗಿ ಲಭ್ಯವಿರುವ ಎಲ್ಲ ಮೂಲಗಳಿಂದ ಲಸಿಕೆ ಖರೀದಿ
- ತಕ್ಷಣವೇ ಉಚಿತ,ಸಾರ್ವತ್ರಿಕ ವ್ಯಾಕ್ಸಿನೇಷನ್ ಅಭಿಯಾನ
- ದೇಶೀಯ ಲಸಿಕೆ ಉತ್ಪಾದನೆ ವಿಸ್ತರಣೆ ಮಾಡಲು ಕಡ್ಡಾಯ ಪರವಾನಗಿ
- ಕೋವಿಡ್ ಲಸಿಕೆಗೋಸ್ಕರ ಬಜೆಟ್ನ 35,000 ಕೋಟಿ ರೂ. ಹಂಚಿಕೆ
- ಸೆಂಟ್ರಲ್ ವಿಸ್ಟಾ ನಿರ್ಮಾಣ ಕಾರ್ಯ ನಲ್ಲಿಸುವುದು, ಅದರ ಹಣ ಆಕ್ಸಿಜನ್, ಲಸಿಕೆಗೆ ಬಳಕೆ
- ಲೆಕ್ಕವಿಲ್ಲದ ಖಾಸಗಿ ಟ್ರಸ್ಟ್ ಫಂಡ್ನಲ್ಲಿರುವ ಎಲ್ಲ ಹಣ ರಿಲೀಸ್ ಮಾಡಿ ಕೋವಿಡ್ ಲಸಿಕೆ, ಆಮ್ಲಜನಕ ಮತ್ತು ವೈದ್ಯಕೀಯ ಉಪಕರಣ ಖರೀದಿ
- ನಿರುದ್ಯೋಗಿಗಳಿಗೆ ತಿಂಗಳಿಗೆ 6 ಸಾವಿರ ಪ್ರೋತ್ಸಾಹ ಧನ
- ಅಗತ್ಯ ಇರುವವರಿಗೆ ಉಚಿತ ಆಹಾರ ಧಾನ್ಯ ವಿತರಣೆ
- ಕೋವಿಡ್ಗೆ ಬಲಿಯಾಗುವ ರೈತರನ್ನ ರಕ್ಷಿಸಲು ಕೃಷಿ ಕಾನೂನು ರದ್ಧುಪಡಿಸುವುದು