ನವದೆಹಲಿ:ಭಾರತದಲ್ಲಿ ಅಮೆರಿಕದ ಜಾನ್ಸನ್ & ಜಾನ್ಸನ್ ಸಿಂಗಲ್ ಡೋಸ್ ಕೊರೊನಾ ಲಸಿಕಾ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಭಾರತದಲ್ಲಿ ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸುವ ಮಹತ್ವದ ಬೆಳವಣಿಗೆಯಲ್ಲಿ, ಯುಎಸ್-ಫಾರ್ಮಾ ದೈತ್ಯ ಜಾನ್ಸನ್ ಮತ್ತು ಜಾನ್ಸನ್ನ ಕೋವಿಡ್ -19 ಲಸಿಕೆ ಸಿಂಗಲ್ ಡೋಸ್ ಕ್ಲಿನಿಕಲ್ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿದು ಬಂದಿದೆ.
ಜೆ & ಜೆ ಶೀಘ್ರದಲ್ಲೇ ಲಸಿಕಾ ಪ್ರಯೋಗಗಳನ್ನು ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. "ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್ಸಿಒ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್)ಗೆ ಪತ್ರವೊಂದನ್ನು ಕಳುಹಿಸಿದ್ದಾರೆ. ಅವರು ಭಾರತದಲ್ಲಿ ಕ್ಲಿನಿಕಲ್ ಬ್ರಿಡ್ಜಿಂಗ್ ಪ್ರಯೋಗಗಳನ್ನು ನಡೆಸಲು ಅನುಮತಿಗಾಗಿ ಶೀಘ್ರದಲ್ಲೇ ಅರ್ಜಿ ಸಲ್ಲಿಸುತ್ತಾರೆ" ಎಂದು ಮೂಲಗಳು ತಿಳಿಸಿವೆ.