ನವದಹೆಲಿ: ಅಮೆರಿಕನ ಮೂಲದ ಫಾರ್ಮಾ ದೈತ್ಯ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ 12-17 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆಯ ಸಿಂಗಲ್ ಡೋಸ್ ಪ್ರಯೋಗಕ್ಕಾಗಿ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರದಿಂದ (ಸಿಡಿಸಿಎಸ್‌ಒ) ಅನುಮತಿ ಕೋರಿದೆ. ಕಂಪನಿಯು ಮಂಗಳವಾರ ಈ ಕುರಿತು ಅರ್ಜಿ ಸಲ್ಲಿಸಿದ್ದು, ವೈರಸ್ ಹರಡುವುದನ್ನು ತಡೆಗಟ್ಟಲು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಲಸಿಕೆ ನೀಡುವುದು ಅತ್ಯವಶ್ಯಕ ಎಂದು ಹೇಳಿದೆ.
12-17 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆಯ ಸಿಂಗಲ್ ಡೋಸ್ ಪ್ರಯೋಗ: ಸಿಡಿಸಿಎಸ್‌ಗೆ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ - ಲಸಿಕೆ
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಕೋವಿಡ್ ಸಿಂಗಲ್ ಡೋಸ್ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ - ಸಿಡಿಸಿಎಸ್‌ಗೆ ಅರ್ಜಿ ಸಲ್ಲಿಸಿದೆ. ವೈರಸ್ ನಿಯಂತ್ರಿಸಲು ಮಕ್ಕಳು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸಂಸ್ಥೆ ಹೇಳಿದೆ.
12-17 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆಯ ಸಿಂಗಲ್ ಡೋಸ್ ಪ್ರಯೋಗ; ಸಿಡಿಸಿಎಸ್‌ಗೆ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ
ದೇಶದಲ್ಲಿ ವಯಸ್ಕರಿಗೆ ಜಾನ್ಸನ್ ಲಸಿಕೆಯ ಸಿಂಗಲ್ ಡೋಸ್‌ನ ತುರ್ತು ಬಳಕೆಗಾಗಿ ಈಗಾಗಲೇ ಸಿಡಿಸಿಎಸ್‌ಒ ಅನುಮತಿ ನೀಡಿದೆ. ಇದು ತ್ವರಿತ ಮಾರ್ಗದಲ್ಲಿ ಅನುಮೋದನೆ ಪಡೆದ ಎರಡನೇ ಲಸಿಕೆಯಾಗಿದೆ. ಜಾನ್ಸನ್ ಜೊತೆಗೆ ಕೋವ್‌ಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್, ಮಾಡರ್ನಾ ಲಸಿಕೆಗಳು ಭಾರತದಲ್ಲಿ ಲಭ್ಯ ಇವೆ.