ಜೋಧಪುರ(ರಾಜಸ್ಥಾನ):ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಇದರ ಬೆನ್ನಲ್ಲೇ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲು ಶುರುವಾಗಿವೆ.
ಪ್ರಮುಖವಾಗಿ, ರಾಜಸ್ಥಾನದ ಜೋಧಪುರದ ಆಭರಣ ಮಾರುಕಟ್ಟೆ ವ್ಯಾಪಾರಿಗಳಿಂದ ಗಿಜಿಗಿಡುತ್ತಿದ್ದು, ಮದುವೆ ಸೀಸನ್ ಆಗಿರುವ ಕಾರಣ ಪ್ರತಿದಿನ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಜೋಧಪುರದ ಆಭರಣ ಮಾರಾಟಗಾರೊಬ್ಬರು ವಧು-ವರರಿಗೆ ಆಕರ್ಷಕವಾದ ಬೆಳ್ಳಿಯ ಬೂಟು, ಪರ್ಸ್ ಸಿದ್ಧಪಡಿಸಿದ್ದಾರೆ.
ರಾಜಸ್ಥಾನ ರಾಜಮನೆತನದ ಮದುವೆಗೆ ಪ್ರಸಿದ್ಧ ತಾಣ. ಈಗಾಗಲೇ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಗೆ ಸಿದ್ಧತೆಗಳು ಅದ್ಧೂರಿಯಾಗಿ ಆರಂಭಗೊಂಡಿವೆ. ಜೈಪುರ, ಜೋಧಪುರ, ಉದಯಪುರ ಸೇರಿದಂತೆ ಅನೇಕ ನಗರಗಳಲ್ಲಿ ಅದ್ಧೂರಿ ವಿವಾಹ ಮಾಡಿಕೊಳ್ಳಲು ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಆಭರಣ ವ್ಯಾಪಾರಿ ವಧು-ವರರಿಗೆ ವಿವಿಧ ಬಗೆಯ ಬೆಳ್ಳಿಯ ವಸ್ತುಗಳನ್ನು ರೆಡಿ ಮಾಡುತ್ತಿದ್ದಾರೆ.
ಬೆಳ್ಳಿಯ ಶೂ, ಪರ್ಸ್ ಮತ್ತು ಬೆಲ್ಟ್