ಜೋಧ್ಪುರ (ರಾಜಸ್ಥಾನ):ಇಲ್ಲಿ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕಡೆಗೂ ಪ್ರತಿಭಟನಾಕಾರರು ಮತ್ತು ಸರ್ಕಾರ ಒಂದು ನಿರ್ಣಯಕ್ಕೆ ಬರುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಮೊದಲು ಸಂತ್ರಸ್ತರಿಗೆ 50 ಲಕ್ಷ ಪರಿಹಾರದ ಪ್ಯಾಕೇಜ್ ನೀಡುವಂತೆ ಸಂತ್ರಸ್ತರ ಕುಟುಂಬ ಬೇಡಿಕೆ ಇಟ್ಟಿತ್ತು. ಇದರಿಂದಾಗಿ ರಾಜಸ್ಥಾನ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಇದೀಗ ಸಂತ್ರಸ್ತರು 17 ಲಕ್ಷದ ಪರಿಹಾರ ಪ್ಯಾಕೇಜ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಏತನ್ಮಧ್ಯೆ ಸಿಲಿಂಡರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿದೆ. ಭುಂಗ್ರಾ ಗ್ರಾಮದಲ್ಲಿ ಸಂಭವಿಸಿದ ಮದುವೆ ಸಮಾರಂಭದಲ್ಲಿ ಈ ಅನಾಹುತ ಸಂಭವಿಸಿತ್ತು. ಘಟನೆ ಸಂಬಂಧ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಅದರ ಅನುಸಾರ ಪರಿಹಾರ ನೀಡುವಂತೆ ಮಹಾತ್ಮ ಗಾಂಧಿ ಶವಾಗಾರದ ಮುಂದೆ ಮೃತದೇಹ ಪಡೆಯದೆ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.