ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (IIIT) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಸ್ಪೋ್ರ್ಟ್ ಕೋಚ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಹೊಂದಿರುವ ಅಭ್ಯರ್ಥಿ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ತಾತ್ಕಾಲಿಕ ಒಪ್ಪಂದದ ಅವಧಿ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು. ಅರ್ಜಿ ಸಲ್ಲಿಕೆ, ನೇಮಕಾತಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯನ್ನು 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.
ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಬಿಪಿ.ಇಡಿ (BP. Ed) ಪದವಿಯನ್ನು ಹೊಂದಿರಬೇಕು ಅಥವಾ ಎರಡು ವರ್ಷ ಪೂರ್ಣ ಅವಧಿ ಕೋಚಿಂಗ್ ಅನುಭವವನ್ನು ಹೊಂದಿರಬೇಕು.
ವೇತನ: ಈ ಹುದ್ದೆಗೆ ಮಾಸಿಕವಾಗಿ 30 ಸಾವಿರ ರೂ. ವೇತನ ನಿಗದಿಸಲಾಗಿದೆ.
ವಯೋಮಿತಿ: ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅನುಸಾರವಾಗಿ ವಯೋಮಿತಿ ನಿಗದಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಸಾಮಾನ್ಯ ಫಿಟ್ನೆಸ್ ಪರೀಕ್ಷೆ, ಮಲ್ಟಿ ಸ್ಪೋರ್ಟ್ ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆ, ಸ್ಪೂರ್ಟ್ ಸ್ಪೆಸಿಫಿಕ್ ಥಿಯರಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.