ಕರ್ನಾಟಕ

karnataka

By

Published : Apr 24, 2023, 3:47 PM IST

ETV Bharat / bharat

ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 242 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ವಿವಿಧ ಶಾರ್ಟ್​ ಸರ್ವೀಸ್​ ಕಮಿಷನ್​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

job-openings-in-indian-navy-applications-invited-for-242-posts
job-openings-in-indian-navy-applications-invited-for-242-posts

ಪದವಿ, ಸ್ನಾತಕೋತ್ತರ ಪದವಿ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವ ಜನತೆಗೆ ಇಲ್ಲೊಂದು ಗುಡ್​ ನ್ಯೂಸ್​ ಇದೆ. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಶಾರ್ಟ್​ ಸರ್ವೀಸ್​ ಕಮಿಷನ್​ ಆಫೀಸರ್​ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಭಾರತದಾದ್ಯಂತ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಅಧಿಸೂಚನೆ

ಹುದ್ದೆ ವಿವರ: ನೌಕಾಪಡೆಯಲ್ಲಿರುವ ಜನರಲ್​ ಸರ್ವೀಸ್​, ಏರ್​ ಟ್ರಾಫಿಕ್​, ನವರಲ್​ ಏರ್​​ ಆಪರೇಷನ್ಸ್​ ಆಫೀಸರ್​, ಪೈಲಟ್​​ ಲಾಜಿಸ್ಟಿಕ್​, ನೌಕಾ ಅರ್ಮನೆಂಟ್​ ಇನ್ಸ್​​ಪೆಕ್ಟೊರೇಟ್​ ಕೇಡರ್​, ಶಿಕ್ಷಣ, ಸೇರಿದಂತೆ ಹಲವು ವಿಭಾಗಗಳಲ್ಲಿ ಖಾಲಿ ಇರುವ 242 ಹುದ್ದೆಗಳ ಭರ್ತಿಗೆ ಮುಮದಾಗಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಬಿಟೆಕ್​, ಎಂಬಿಎ, ಎಂಎಸ್ಸಿ, ಎಂಸಿಎ, ಬಿಎಸ್ಸಿ, ಸೇರಿದಂತೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಜನವರಿ 2, 1999ರಿಂದ 2005 ಜನವರಿಗೆ 1ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆಗೆ ಮಾಸಿಕ 56,100 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿಯಲ್ಲಿ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ ಈ ಹುದ್ದೆಗಳನ್ನು ಮೆರಿಟ್​ ಜೊತೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಎನ್​ಸಿಸಿ ಅಭ್ಯರ್ಥಿಗಳಿಗೆ ಶೇ 5ರಷ್ಟು ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ ಹೇಗೆ: ಈ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳು ಮತ್ತು ಪ್ರಮಾಣ ಪತ್ರಗಳನ್ನು ಸಲ್ಲಿಸುವ ಮೂಲಕ ಅರ್ಜಿ ಭರ್ತಿ ಮಾಡಬಹುದಾಗಿದೆ.

ಈ ಹುದ್ದೆಗಳನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದಲ್ಲಿ 10 ವರ್ಷಗಳವರೆಗೆ ಶಾರ್ಟ್​ ಸರ್ವೀಸ್​ ಕಮಿಷನ್​ ಸೇವೆಯನ್ನು ನೀಡಲಾಗುತ್ತದೆ. ಈ ಹುದ್ದೆಯನ್ನು ಗರಿಷ್ಠ 2 ಅವಧಿಗೆ ಅಂದರೆ (02 ವರ್ಷಗಳು + 02 ವರ್ಷಗಳು) ಗರಿಷ್ಠ 04 ವರ್ಷಗಳವರೆಗೆ ವಿಸ್ತರಿಸಬಹುದು. ಸೇವಾ ಅಗತ್ಯತೆ, ಕಾರ್ಯಕ್ಷಮತೆ, ವೈದ್ಯಕೀಯ ಅರ್ಹತೆ ಮತ್ತು ಅಭ್ಯರ್ಥಿಗಳ ಇಚ್ಛೆ ಮೇರೆಗೆ ಈ ಹುದ್ದೆ ವಿಸ್ತರಣೆ ನಡೆಸಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಏಪ್ರಿಲ್​ 29ರಿಂದ ಆರಂಭವಾಗಲಿದ್ದು, ಮೇ 14ರವರೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಇನ್ನಿತರ ವಿವರ ಪಡೆಯಲು ಭಾರತೀಯ ನೌಕಪಡೆ ಜಾಲತಾಣವಾದjoinindiannavy.gov.in ಗೆ ಭೇಟಿ ನೀಡಬೇಕಿದೆ.

ಇದನ್ನೂ ಓದಿ: UPSC ನೇಮಕಾತಿ: ಜ್ಯೂ.ಎಂಜಿನಿಯರ್​ ಸೇರಿ 146 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details