ಭಾರತೀಯ ಸೇನೆ ಸೇರಬೇಕು. ದೇಶಕ್ಕಾಗಿ ಸೇವೆ ಮಾಡಬೇಕು ಎಂಬುದು ಅನೇಕ ಜನರ ಕನಸು. ಈ ಕನಸಿಗೆ ಇದೀಗ ಭಾರತೀಯ ಸೇನೆ ಅವಕಾಶ ನೀಡಿದೆ. ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏಪ್ರಿಲ್ 2, 1997 ಮತ್ತು ಏಪ್ರಿಲ್ 1, 2004ರ ನಡುವೆ ಜನಿಸಿರಬೇಕು. ಈ ಹುದ್ದೆಗಳ ತರಬೇತಿ ತಮಿಳುನಾಡಿನ ಚೆನ್ನೈನಲ್ಲಿರುವ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆಯಲಿದೆ.
ಹುದ್ದೆ ವಿವರ:
- ಎಸ್ಎಸ್ಸಿ (ತಾಂತ್ರಿಕ)- 62 ಮೆನ್: 175 ಹುದ್ದೆ
- ಎಸ್ಎಸ್ಸಿ (ತಾಂತ್ರಿಕ- 33 ವುಮೆನ್: 19 ಹುದ್ದೆ
- ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿ: 2
ವಿದ್ಯಾರ್ಹತೆ: ಎಸ್ಎಸ್ಸಿ (ತಾಂತ್ರಿಕ) ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಇಂಜಿನಿಯರ್, ಮೆಕಾನಿಕಲ್ ಇಂಜಿನಿಯರ್, ಮಿಸ್ಕ್ ಇಂಜಿನಿಯರಿಂಗ್ ನಲ್ಲಿ ಬಿಇ ಅಥವಾ ಬಿಟೆಕ್ ಪದವಿಯನ್ನು ಹೊಂದಿರಬೇಕು.
ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ಹುದ್ದೆಗೆ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:ಎಸ್ಎಸ್ಸಿ (ತಾಂತ್ರಿಕ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಟ 20 ರಿಂದ ಗರಿಷ್ಠ 27 ವರ್ಷದ ವಯೋಮಿತಿಯೊಳಗೆ ಇರಬೇಕು. ಎಸ್ಎಸ್ಸಿಡಬ್ಲ್ಯೂ (ತಾಂತ್ರಿಕೇತರ) ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ ಆಗಿದೆ.