ಕರ್ನಾಟಕ

karnataka

ಭಾರತೀಯ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: 1,899 ಹುದ್ದೆಗಳಿಗೆ ಅರ್ಜಿ ಆಹ್ವಾನ

By ETV Bharat Karnataka Team

Published : Nov 10, 2023, 12:28 PM IST

India Post Recruitment: ದೇಶಾದ್ಯಂತ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

1899 job notification form India post
1899 job notification form India post

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 1,899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾ ಕೋಟದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಗ್ರೂಪ್​ ಸಿ ಹುದ್ದೆಗಳು ಇವಾಗಿದ್ದು, ದೇಶಾದ್ಯಂತ ಮಕಾತಿ ನಡೆಯಲಿದೆ.

ಅಧಿಸೂಚನೆ

ಹುದ್ದೆಗಳೇನು?:

  • ಪೋಸ್ಟಲ್​ ಅಸಿಸ್ಟೆಂಟ್​- 598 ಹುದ್ದೆಗಳು
  • ಸೋರ್ಟಿಂಗ್​ ಅಸಿಸ್ಟೆಂಟ್-​ 143
  • ಪೋಸ್ಟಮ್ಯಾನ್​- 585
  • ಮೇಲ್​ ಗಾರ್ಡ್-​​​ 3
  • ಮಲ್ಟಿ ಟಾಸ್ಕಿಂಗ್​ ಸ್ಟಾಫ್-​ 570

ವಿದ್ಯಾರ್ಹತೆ: ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸಿರಬೇಕು. ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಶಿಕ್ಷಣ ಪಡೆದಿರಬೇಕು.

ವಯೋಮಿತಿ: ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹೊರತುಪಡಿಸಿ ಬೇರೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು. ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 25 ವರ್ಷ ಪೂರ್ಣಗೊಳಿಸಿರಬೇಕು.

ವೇತನ: ಪೋಸ್ಟಲ್​ ಅಸಿಸ್ಟೆಂಟ್​​ ಮತ್ತು ಸೋರ್ಟಿಂಗ್​ ಅಸಿಸ್ಟೆಂಟ್​ ಹುದ್ದೆಗೆ- ₹25,500 ದಿಂದ ₹81,100 ರೂ, ಪೋಸ್ಟ್​​ ಮ್ಯಾನ್​, ಮೆಲ್​ ಗಾರ್ಡ್​ ಹುದ್ದೆಗೆ 21,700 ದಿಂದ 69,100 ರೂ, ಮಲ್ಟಿ ಟಾಸ್ಕಿಂಗ್​ ಸ್ಟಾಫ್​ ಹುದ್ದೆಗೆ 18,000 ದಿಂದ 56,900ರವರೆಗೆ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಭರಿಸಬೇಕು.

ಆಯ್ಕೆ ಪ್ರಕ್ರಿಯೆ:ಮೆರಿಟ್​ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ನವೆಂಬರ್​ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್​ 9 ಕಡೇಯ ದಿನಾಂಕ. ಈ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indiapost.gov.inಇಲ್ಲಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:ನಿಮ್ಹಾನ್ಸ್​​ನಲ್ಲಿದೆ 32 ಜಿಲ್ಲಾ ಕೋ ಆರ್ಡಿನೇಟರ್​ ಹುದ್ದೆ: ಪದವಿ ಆಗಿದ್ರೆ ಸಾಕು

ABOUT THE AUTHOR

...view details