ಕರ್ನಾಟಕ

karnataka

Job Alert! ಪವರ್​ ಗ್ರೀಡ್​ನಲ್ಲಿ ಡಿಪ್ಲೊಮಾ ಟ್ರೈನಿ ನೇಮಕಾತಿ; 425 ಹುದ್ದೆಗಳಿಗೆ ಅರ್ಜಿ ಆಹ್ವಾನ

By ETV Bharat Karnataka Team

Published : Sep 1, 2023, 5:21 PM IST

ಕರ್ನಾಟಕ ಸೇರಿದಂತೆ ವಿವಿಧ ಪ್ರದೇಶವಾರು ಅನುಸಾರ ದೇಶಾದ್ಯಂತ ಈ ಹುದ್ದೆಗಳಿಗೆ ಪಿಜಿಸಿಐಎಲ್ ನೇಮಕಾತಿ ನಡೆಸಲಿದೆ.

425 diploma trainee post Notification By PGCIL
425 diploma trainee post Notification By PGCIL

ಪವರ್​ ಗ್ರೀಡ್​ ಕಾರ್ಪೊರೇಷನ್​ ಆಫ್​ ಇಂಡಿಯಾ ಲಿಮಿಟೆಡ್​​ (ಪಿಜಿಸಿಐಎಲ್​) ಖಾಲಿ ಇರುವ ಡಿಪ್ಲೊಮಾ ಟ್ರೈನಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 425 ಹುದ್ದೆಗಳ ಭರ್ತಿಗೆ ಅಧಿಸೂಚನೆಯಾಗಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ

ಹುದ್ದೆಗಳ ವಿವರ: ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್​)- 344 ಹುದ್ದೆಗಳು, ಡಿಪ್ಲೊಮಾ ಟ್ರೈನಿ (ಸಿವಿಲ್​) 68 ಹುದ್ದೆಗಳು), ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಾನಿಕ್ಸ್​​)- 13 ಹುದ್ದೆಗಳು ಸೇರಿದಂತೆ ಒಟ್ಟು 425 ಹುದ್ದೆಗಳಿಗೆ ನೇಮಕಾತಿ.

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್​​, ಸಿವಿಲ್​ ಮತ್ತು ಎಲೆಕ್ಟ್ರಿಕಲ್​, ಟೆಲಿ ಕಮ್ಯೂನಿಕೇಷನ್​ನಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಡಿಪ್ಲೊಮಾ ಪದವಿ. ಬಿಇ, ಬಿ.ಟೆಕ್​ ಅಥವಾ ಎಂಇ, ಎಂ.ಟೆಕ್​ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಟ 18ರಿಂದ ಗರಿಷ್ಠ 27 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ವಿಶೇಷಚೇತನ, ನಿವೃತ್ತ ಸೇವಾಧಿಕಾರಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ. ಉಳಿದ ಅಭ್ಯರ್ಥಿಗಳು 300 ರೂ ಅರ್ಜಿ ಶುಲ್ಕವನ್ನು ಆನ್​ಲೈನ್​ ಪೇಮೆಂಟ್​ ಮೂಲಕ ಭರಿಸಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ. ಸೆಪ್ಟೆಂಬರ್​ 1ರಿಂದ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್​ 23 ಕಡೇಯ ದಿನ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಪರಿಶೀಲನೆಗೆ ಅಭ್ಯರ್ಥಿಗಳು powergridindia.com ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಕೆರಿಯರ್​ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ, ಓಪನಿಂಗ್​ ರಿಕ್ರುಟ್​ಮೆಂಟ್​ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: SBI Recruitment: 6160 ಅಪ್ರೆಂಟಿಸ್​​ ಹುದ್ದೆ ನೇಮಕಾತಿ; ಕನ್ನಡದಲ್ಲೂ ಬರೆಯಬಹುದು ಪರೀಕ್ಷೆ

ABOUT THE AUTHOR

...view details