ಶ್ರೀನಗರ:ಕಾರಾಗೃಹದ ಮಹಾನಿರ್ದೇಶಕಾರದ ಹೇಮಂತ್ ಕುಮಾರ್ ಲೋಹಿಯಾ ಅವರು ಜಮ್ಮು ನಗರದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಇದು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಮ್ಮು ವಲಯದ ಎಡಿಜಿಪಿ ಮುಖೇಶ್ ಸಿಂಗ್ ಮಾತನಾಡಿ, 'ಕಾರಾಗೃಹದ ಡಿಜಿ ಹೇಮಂತ್ ಲೋಹಿಯಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ರೀತಿ ಕಾಣುತ್ತದೆ. ಲೋಹಿಯಾ ಅವರ ಮನೆಯ ಕೆಲಸಗಾರ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದರು.
ಈ ನಡುವೆ ಫೋರೆನ್ಸಿಕ್ ಮತ್ತು ಅಪರಾಧ ತಂಡಗಳು ತನಿಖೆಗಾಗಿ ಸ್ಥಳಕ್ಕೆ ಧಾವಿಸಿವೆ. ತನಿಖಾ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಮುಖೇಶ್ ಸಿಂಗ್ ಹೇಳಿದ್ದಾರೆ.