ಸಾಂಬಾ (ಜಮ್ಮು ಮತ್ತು ಕಾಶ್ಮೀರ): ಮೂವರು ಬಿಜೆಪಿ ಕಾರ್ಯಕರ್ತರನ್ನು ಮತ್ತು ಪೊಲೀಸ್ನನ್ನು ಕೊಲೆ ಮಾಡಿದ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರು ಬಿಜೆಪಿ ಕಾರ್ಯಕರ್ತರು, ಪೊಲೀಸ್ನನ್ನು ಕೊಂದಿದ್ದ ಉಗ್ರ ಅರೆಸ್ಟ್ - ಜಮ್ಮಕಾಶ್ಮೀರ ಪೊಲೀಸ್ ಸುದ್ದಿ,
'ದಿ ರೆಸಿಸ್ಟೆನ್ಸ್ ಫೋರ್ಸ್'ನ ಭಯೋತ್ಪಾದಕನನ್ನು ಸಾಂಬಾದಲ್ಲಿ ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
'ದಿ ರೆಸಿಸ್ಟೆನ್ಸ್ ಫೋರ್ಸ್'ನೊಂದಿಗೆ ಸಂಯೋಜಿತವಾಗಿದ್ದ ಭಯೋತ್ಪಾದಕ ಜಹೂರ್ ಅಹ್ಮದ್ ರಾಥರ್ ಅಲಿಯಾಸ್ ಖಾಲಿದ್ ಅಲಿಯಾಸ್ ಸಾಹಿಲ್ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಳೆದ ವರ್ಷ ವೆಸ್ಸುವಿನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಮತ್ತು ಕುಲ್ಗಾಂನ ಫರ್ರಾದಲ್ಲಿ ಒಬ್ಬ ಪೊಲೀಸರನ್ನು ಉಗ್ರ ಸಾಹಿಲ್ ಕೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.