ಕರ್ನಾಟಕ

karnataka

ETV Bharat / bharat

ಎನ್​ಕೌಂಟರ್​ನಲ್ಲಿ ಹತ: ವರ್ಷದ ಬಳಿಕ ಶವ ಹೊರತೆಗೆಯಲು ಸರ್ಕಾರಕ್ಕೆ ಆದೇಶಿಸಿದ ಕೋರ್ಟ್ ! - ಎನ್​ಕೌಂಟರ್​ನಲ್ಲಿ ಹತನಾದಿದ್ದವನ ಶವ ಹೊರತೆಗೆಯಲು ಆದೇಶ

ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 19 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಶವವನ್ನು ರಾಂಬನ್‌ನಲ್ಲಿರುವ ಸ್ವಗ್ರಾಮಕ್ಕೆ ಅಂತ್ಯಕ್ರಿಯೆಗಾಗಿ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಎನ್​ಕೌಂಟರ್​ನಲ್ಲಿ ಹತನಾದಿದ್ದವನ ಶವ ಹೊರತೆಗೆಯಲು ಆದೇಶ
ಎನ್​ಕೌಂಟರ್​ನಲ್ಲಿ ಹತನಾದಿದ್ದವನ ಶವ ಹೊರತೆಗೆಯಲು ಆದೇಶ

By

Published : May 27, 2022, 9:42 PM IST

ಶ್ರೀನಗರ: ಕಳೆದ ವರ್ಷ ಶ್ರೀನಗರದ ಹೈದರ್‌ಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರು ಉಗ್ರರಲ್ಲಿ ಒಬ್ಬನಾದ ಮೊಹಮ್ಮದ್ ಅಮೀರ್ ಮಗ್ರೆ ಅವರ ಕಳೆಬರಹವನ್ನು ಹೊರತೆಗೆಯಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಇಂದು ಆದೇಶಿಸಿದೆ. ಈಟಿವಿ ಭಾರತಕ್ಕೆ ಈ ಬಗ್ಗೆ ಖಚಿತಪಡಿಸಿದ ವಕೀಲರಾದ ದೀಪಿಕಾ ಸಿಂಗ್ ರಾಜಾವತ್, ಸಂಜೀವ್ ಕುಮಾರ್ ನೇತೃತ್ವದ ಪೀಠವು ಶವವನ್ನು ಹೊರತೆಗೆಯಲು ಆದೇಶಿಸಿದೆ ಎಂದು ಹೇಳಿದ್ದಾರೆ.

ಅಮೀರ್ ಅವರ ತಂದೆ ಮೊಹಮ್ಮದ್ ಲತೀಫ್ ಮ್ಯಾಗ್ರೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿ ವಿಚಾರಣೆ ನಡೆಸಿತ್ತು. ಆದ್ದರಿಂದ ಅವರ ಕುಟುಂಬಕ್ಕೆ ತಮ್ಮ ಮಗನ ಮರು ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ವಕೀಲರು ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಈ ಬಗ್ಗೆ ಮೊಹಮ್ಮದ್​ ಲತೀಫ್​​ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಬಗ್ಗೆ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 19 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಶವವನ್ನು ರಾಂಬನ್‌ನಲ್ಲಿರುವ ಸ್ವಗ್ರಾಮಕ್ಕೆ ಅಂತ್ಯಕ್ರಿಯೆಗಾಗಿ ಸಾಗಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ. ದೇಹವು ಹೆಚ್ಚು ಕೊಳೆತಿದ್ದರೆ ಮತ್ತು ಅದನ್ನು ಬೇರೆ ಕಡೆ ತೆಗೆದುಕೊಂಡು ಹೋಗಲಾಗದ ಸ್ಥಿತಿಯಲ್ಲಿಲ್ಲದಿದ್ದರೆ ಅಥವಾ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಅಪಾಯಕಾರಿಯಾಗಿದ್ದರೆ ಅಮೀರ್ ಅವರ ತಂದೆ ಮತ್ತು ಅವರ ನಿಕಟ ಸಂಬಂಧಿಗಳಿಗೆ ಮಾತ್ರ ಅವಕಾಶ ನೀಡಿ ಅವರ ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಯಂತೆ ಅಂತಿಮ ವಿಧಿಗಳನ್ನು ಮಾಡಲು ಅನುಮತಿಸಲಾಗುವುದು ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿದೆ.

ಈ ಪ್ರಕರಣದಲ್ಲಿ ತನ್ನ ಮಗನ ಮೃತದೇಹಕ್ಕೆ ಸಲ್ಲಿಸಬೇಕಾದ ಅಂತಿಮ ವಿಧಿವಿದಾನದ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಅರ್ಜಿದಾರನಿಗೆ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಪಾವತಿಸಬೇಕು ಮತ್ತು ಕುಟುಂಬದ ಸಂಪ್ರದಾಯಗಳು, ಧಾರ್ಮಿಕ ಕಟ್ಟುಪಾಡುಗಳು ಮತ್ತು ನಂಬಿಕೆಯ ಪ್ರಕಾರ ಅವನಿಗೆ ಯೋಗ್ಯವಾದ ಅಂತ್ಯಕ್ರಿಯೆ ವ್ಯವಸ್ಥೆ ಮಾಡಿಕೊಡಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.

ರಾಂಬನ್‌ನಲ್ಲಿರುವ ಅವರ ನಿವಾಸದ ಬಳಿ ಸಮಾಧಿ ಮಾಡಲು ಅಮೀರ್ ಅವರ ದೇಹವನ್ನು ಹಸ್ತಾಂತರಿಸುವಂತೆ ಕೇಂದ್ರ ಗೃಹ ಸಚಿವಾಲಯ, ಜೆ & ಕೆ ಆಡಳಿತ ಮತ್ತು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಹೊರತೆಗೆಯುವಿಕೆಯ ಕಾರ್ಯಕ್ಕೆ ವೇಗ ನೀಡಬೇಕು ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಯನ್ನು ಸಾರ್ವಜನಿಕಗೊಳಿಸಲು ಮ್ಯಾಗ್ರೆ ಅವರು ಡಿಸೆಂಬರ್ 7, 2021 ರಂದು ಲೆಫ್ಟಿನೆಂಟ್ ಗವರ್ನರ್ ಅವರನ್ನು ಸಹ ಭೇಟಿಯಾಗಿದ್ದರು.

ಇದನ್ನೂ ಓದಿ:ಕೇಸರಿನಲ್ಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ: ಐಎಎಸ್​ ಅಧಿಕಾರಿ ನಡೆಗೆ ಮೆಚ್ಚುಗೆ

For All Latest Updates

TAGGED:

ABOUT THE AUTHOR

...view details