ಮುಂಬೈ:ಕೋವಿಡ್ ಕಾರಣಕ್ಕಾಗಿ ರೀಚಾರ್ಚ್ ಮಾಡಲು ಸಾಧ್ಯವಾಗದ ಬಳಕೆದಾರರಿಗೆ ಜಿಯೋ ಭರ್ಜರಿ ಗಿಫ್ಟ್ ನೀಡಿದೆ. ಕೊರೊನಾ ಅವಧಿಯಲ್ಲಿ ತಿಂಗಳಿಗೆ 300 ನಿಮಿಷಗಳ ಉಚಿತ ಕರೆಗಳನ್ನು (ದಿನಕ್ಕೆ 10 ನಿಮಿಷ) ಸೇರಿ ಹಲವು ಆಫರ್ಗಳನ್ನು ನೀಡಿದೆ.
ಜಿಯೋ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಆಫರ್ಗಳನ್ನು ನೀಡಲಾಗಿದೆ ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ. ರಿಲಯನ್ಸ್ ಫೌಂಡೇಶನ್ನೊಂದಿಗೆ ಕೆಲಸ ಮಾಡುತ್ತಿರುವ ಜಿಯೋ, ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ತಿಂಗಳಿಗೆ 300 ನಿಮಿಷ ಹೊರ ಹೋಗುವ ಕರೆಗಳನ್ನು (Out going calls) ಉಚಿತವಾಗಿ ನೀಡುತ್ತಿದೆ.
ಈಗಾಗಲೇ ರೀಚಾರ್ಜ್ ಮಾಡಿರುವವರಿಗೆ ಹೆಚ್ಚುವರಿ ಯೋಜನೆ ಒದಗಿಸಲಾಗುವುದು. ಅಂದರೆ ನೀವು 75 ರೂಪಾಯಿ ರೀಚಾರ್ಜ್ ಮಾಡಿದರೆ, ಯಾವುದೇ ಹಣ ಕಟ್ ಆಗದೆ 75 ರೂಪಾಯಿಯೂ ನಿಮ್ಮ ಮೊಬೈಲ್ಗೆ ಜಮೆಯಾಗುತ್ತದೆ.