ನವದೆಹಲಿ:ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಜಿಯೋ ಮೊಬೈಲ್ ನೆಟ್ವರ್ಕ್ ಡೌನ್ ಆಗಿದೆ ಎಂದು ಕೆಲವು ಗ್ರಾಹಕರು ದೂರು ನೀಡಿದ್ದು, ಈ ಸಮಸ್ಯೆ ಕೆಲವು ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆಯೇ ಅಥವಾ ದೇಶದ ಹಲವಡೆ ಕಾಣಿಸಿಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ನಲ್ಲಿ ನೆಟ್ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ.#jioddown ಎಂಬುದು ಟ್ವಿಟರ್ ಟ್ರೆಂಡಿಂಗ್ ಕೂಡಾ ಆಗಿದ್ದು, ಡೌನ್ ಡಿಟೆಕ್ಟರ್ (Downdetector)ನಲ್ಲಿ ಸುಮಾರು 4000 ಮಂದಿ ಬೆಳಗ್ಗೆಯಿಂದ ಜಿಯೋ ನೆಟ್ವರ್ಕ್ ಸಮಸ್ಯೆ ಇದೆ ಎಂದು ದೂರು ನೀಡಿದ್ದಾರೆ.
ರಿಲಯನ್ಸ್ ಜಿಯೋದ ಅಧಿಕೃತ ಗ್ರಾಹಕ ಸೇವಾ ಟ್ವಿಟರ್ ಖಾತೆಯಾದ @JioCare ಖಾತೆಗೆ ಸಾಕಷ್ಟು ಮಂದಿ ದೂರುಗಳನ್ನು ನೀಡಿದ್ದಾರೆ. ದೇಶದ ವಿವಿಧ ಕಡೆಗಳಿಂದ ಈ ದೂರುಗಳು ಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದಿದೆ.