ನವದೆಹಲಿ: ಒಂದು ತಿಂಗಳ ಮಾನ್ಯತೆಯೊಂದಿಗೆ ಜಿಯೋ ರೂ. 259 ಪ್ರಿಪೇಯ್ಡ್ ಯೋಜನೆ ಜಾರಿ ಮಾಡಿದೆ. ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಈ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದರ ವಿಶೇಷತೆಯ ಬಗ್ಗೆ ಹೇಳುವುದಾದರೆ ಇದರ ಮಾನ್ಯತೆಯು ಪೂರ್ಣ ತಿಂಗಳು ಇರುತ್ತದೆ. ಇದು ಸಂಪೂರ್ಣ 1 ತಿಂಗಳ ಅಂದರೆ ಕ್ಯಾಲೆಂಡರ್ ತಿಂಗಳ ಮಾನ್ಯತೆಯೊಂದಿಗೆ ಬಂದಿರುವ ಟೆಲಿಕಾಂ ಉದ್ಯಮದ ಮೊದಲ ಯೋಜನೆ ಇದಾಗಿದೆ.
ಇದರರ್ಥ ಬಳಕೆದಾರರು ಇನ್ನು ಮುಂದೆ 28 ದಿನಗಳ ಮಾನ್ಯತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಉದಾಹರಣೆಗೆ ನೀವು ಈ ತಿಂಗಳ 5 ರಂದು ರೀಚಾರ್ಜ್ ಮಾಡಿದರೆ ಮುಂದಿನ ತಿಂಗಳು 5 ರಂದು ರೀಚಾರ್ಜ್ ಮಾಡಬೇಕು. ಜಿಯೋದ ಈ ಯೋಜನೆಯು ಬಳಕೆದಾರರಿಗೆ ತುಂಬಾ ಇಷ್ಟವಾಗಲಿದೆ.
ಜಿಯೋದ ರೂ.259 ಪ್ಲಾನ್‌ನ ಪ್ರಯೋಜನಗಳು : ಈ ಯೋಜನೆಯಲ್ಲಿ ದಿನಕ್ಕೆ 1.5 GB ಡೇಟಾವನ್ನು ನೀಡಲಾಗುವುದು. ದೈನಂದಿನ FUP (Fair Usage Policy) ಮಿತಿಯು ಮುಗಿದ ನಂತರ, ಬಳಕೆದಾರರು 64Kbps ವೇಗವನ್ನು ಪಡೆಯಬಹುದು. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಲು ಅನಿಯಮಿತ ಕರೆ ನೀಡಲಾಗುವುದು. ಇದಲ್ಲದೇ ದಿನಕ್ಕೆ 100 ಎಸ್ಎಂಎಸ್ ಕೂಡ ಉಚಿತವಾಗಿದೆ. ಜೊತೆಗೆ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ:ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ
ರೂ.259 ಯೋಜನೆಯನ್ನು ಒಂದೇ ಬಾರಿಗೆ ಹಲವಾರು ಬಾರಿ ರೀಚಾರ್ಜ್ ಮಾಡಿದರೂ ಯಾವುದೇ ತೊಂದರೆ ಇಲ್ಲ. ಪ್ರಸ್ತುತ ಯೋಜನೆ ಮುಗಿದ ತಕ್ಷಣ, ಮುಂದಿನ ಯೋಜನೆಯು ಸಕ್ರಿಯಗೊಳ್ಳುತ್ತದೆ.