ಕರ್ನಾಟಕ

karnataka

ETV Bharat / bharat

Jio ಬಳಕೆದಾರರಿಗೆ ಬಂಪರ್​ ಆಫರ್​: ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭ

‘ಈಗ ರೀಚಾರ್ಜ್ ಮಾಡಿ ಮತ್ತು ನಂತರ ಪಾವತಿಸಿ’ ಎಂಬ ಆಯ್ಕೆ ಮೂಲಕ Jio ತುರ್ತು ಡೇಟಾ ಸಾಲ ಸೌಲಭ್ಯವನ್ನು ಘೋಷಿಸಿ ಕೊರೊನಾ ಕಾಲದಲ್ಲಿ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಜಿಯೋ ಬಂಪರ್​ ಕೊಡುಗೆ ನೀಡಿದೆ.

Jio
ತುರ್ತು ಡೇಟಾ ಸಾಲ ಸೌಲಭ್ಯ

By

Published : Jul 3, 2021, 12:55 PM IST

ಮುಂಬೈ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ತುರ್ತು ಡೇಟಾ ಸಾಲ ಸೌಲಭ್ಯವನ್ನು ಘೋಷಿಸಿದೆ. ಜಿಯೋ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಈ ಸೌಲಭ್ಯವು Jio ಚಂದಾದಾರರಿಗೆ ಡೇಟಾ ಖಾಲಿಯಾದ ತಕ್ಷಣವೇ ತ್ವರಿತವಾಗಿ ಡೇಟಾ ಸಾಲ ಪಡೆಯಲು ತುರ್ತು ಡೇಟಾ ಸಾಲ ಸೌಲಭ್ಯ ಪ್ರಾರಂಭಿಸಿದೆ.

ತಮ್ಮ ದೈನಂದಿನ ಸ್ಪೀಡ್​ ಡೇಟಾ ಕೋಟಾದಿಂದ ಹೊರಗುಳಿದಿರುವ ಮತ್ತು ತಕ್ಷಣ ರೀಚಾರ್ಜ್ ಮಾಡಲು ಸಾಧ್ಯವಾಗದ ಜಿಯೋ ಬಳಕೆದಾರರಿಗೆ ತುರ್ತು ಡೇಟಾ ಸಾಲ ಸೌಲಭ್ಯವು ‘ಈಗ ರೀಚಾರ್ಜ್ ಮಾಡಿ ಮತ್ತು ನಂತರ ಪಾವತಿಸಿ’(Recharge Now and Pay Later) ಎಂಬ ಆಪ್ಷನ್​ ನೀಡಲಿದೆ.

ತುರ್ತು ಡೇಟಾ ಸಾಲ ಸೌಲಭ್ಯವನ್ನು ಪಡೆಯುವ ವಿಧಾನಗಳು:

1.MyJio ಆ್ಯಪ್​ ತೆರೆದು​ ಮೆನು ಆಪ್ಷನ್​​ ಕ್ಲಿಕ್​​ ಮಾಡಿ

2.ನಂತರ ಅದರಲ್ಲಿ ‘Emergency Data Loan’ ಆಪ್ಷನ್​ ಸೆಲೆಕ್ಟ್​ ಮಾಡಿ

3.Emergency Data Loan(ತುರ್ತು ಡೇಟಾ ಸಾಲ )ಬ್ಯಾನರ್‌ನಲ್ಲಿ ‘ Proceed’ ಎಂಬ ಆಯ್ಕೆ ಮಾಡಿ ಕ್ಲಿಕ್ ಮಾಡಿ

4.ನಂತರ ‘Get emergency data’ ಅನ್ನು ಆಯ್ಕೆ ​ಮಾಡಿ

5. ನಂತರ ಎಮೆರ್ಜೆನ್ಸಿ ಲೋನ್​ ಪಡೆಯಲು ‘Activate now’ ಕ್ಲಿಕ್ ಮಾಡಿ

6 ಇಷ್ಟು ಮಾಡಿದ ನಂತರ ನಿಮಗೆ ಡೇಟಾ ಲೋನ್​ ಸೌಲಭ್ಯ ದೊರೆಯಲಿದೆ.

ABOUT THE AUTHOR

...view details