ಕರ್ನಾಟಕ

karnataka

ETV Bharat / bharat

Airtel ದಾರಿ ಹಿಡಿದ 'Jio': ಜಿಯೋ ಪ್ಲಾನ್​​ಗಳ ಹೊಸ ಬೆಲೆ ಎಷ್ಟು ಗೊತ್ತಾ..!

ಕರೆ ಮತ್ತು ಡೇಟಾ ದರ ಹೆಚ್ಚಳ ಮಾಡುವ ಮೂಲಕ ರಿಲಯನ್ಸ್​ ಜಿಯೋ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. 78 ರೂ. ಇದ್ದ ಜಿಯೋದ ಅನಿಯಮಿತ ಕರೆಗಳ ಆರಂಭಿಕ ಪ್ಲಾನ್‌ ಈಗ 91 ರೂ.ಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಇತರ ಪ್ಲಾನ್‌ಗಳಲ್ಲಿಯೂ ಸರಾಸರಿ ಶೇ. 20ರಷ್ಟು ದರ ಹೆಚ್ಚಳವಾಗಲಿದ್ದು, ಪರಿಷ್ಕೃತ ದರಗಳು ಡಿಸೆಂಬರ್​​ 1ರಿಂದ ಜಾರಿಗೆ ಬರಲಿವೆ.

By

Published : Nov 29, 2021, 1:41 PM IST

jio-announced-tariff-hike
ರಿಲಯನ್ಸ್‌ ಜಿಯೋ

ಮುಂಬೈ: ಬೆಲೆ ಹೆಚ್ಚಳ ಸುದ್ದಿ ಕೇಳಿ ಕೇಳಿ ಸಾಕಾಗಿದ್ದ ಜನರಿಗೆ ಇದೀಗ ಟೆಲಿಕಾಂ ಸಂಸ್ಥೆಗಳ ಬೆಲೆ ಏರಿಕೆ ಮತ್ತೊಂದು ಶಾಕ್​ ನೀಡಿದೆ. ಏರ್‌ಟೆಲ್‌, ವೊಡಾಫೋನ್‌ ಮತ್ತು ಐಡಿಯಾ ಬಳಿಕ ರಿಲಯನ್ಸ್‌ ಜಿಯೋ ಕೂಡ ತನ್ನ ಕರೆ ಮತ್ತು ಡೇಟಾ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದು, ಈ ಕುರಿತು ಭಾನುವಾರ ದರ ಹೆಚ್ಚಳ ಪಟ್ಟಿ ಪ್ರಕಟಿಸಿದೆ.

jio increase prices: 78 ರೂ. ಇದ್ದ ಜಿಯೋದ ಅನಿಯಮಿತ ಕರೆಗಳ ಆರಂಭಿಕ ಯೋಜನೆ ಈಗ 91 ರೂ.ಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಇತರ ಪ್ಲಾನ್​​​ಗಳಲ್ಲಿಯೂ ಸರಾಸರಿ ಶೇ. 20ರಷ್ಟು ದರ ಹೆಚ್ಚಳವಾಗಲಿದ್ದು, ಪರಿಷ್ಕೃತ ದರಗಳು ಡಿಸೆಂಬರ್​​ 1ರಿಂದ ಜಾರಿಗೆ ಬರಲಿವೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಯೋ, ಭಾರತೀಯ ದೂರಸಂಪರ್ಕ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ದರ ಹೆಚ್ಚಳ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಜಿಯೋ ಮೂಲಕ ಇಂಟರ್ನೆಟ್‌ ಸ್ವಾವಲಂಬನೆ ಸಾಧಿಸಿದ ಭಾರತೀಯರು ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದೆ.

ಜಿಯೋ ದರ ಹೆಚ್ಚಳ : ಈಗಿರುವ 129 ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ ದರ ಡಿಸೆಂಬರ್‌ 1 ರಿಂದ 155 ರೂ.ಗೆ ಹೆಚ್ಚಳವಾಗಲಿದೆ. 399 ರೂ. ಪ್ಲಾನ್​​​ ನ್‌ ದರ 479 ರೂ.ಗೆ, 1,299 ರೂ. ಪ್ಲ್ಯಾನ್‌ ದರ 1,559 ರೂ., 2,399 ರೂ. ಪ್ಲ್ಯಾನ್‌ ದರ 2,879 ರೂ.ಗೆ ಏರಿಕೆಯಾಗಲಿದೆ.

ಜಿಯೋದ ಡಾಟಾ ಟಾಪ್‌ಅಪ್‌ ಪ್ಲಾನ್‌ಗಳ ದರಗಳೂ ಏರಿಕೆಯಾಗಲಿವೆ. ಈಗ 6 ಜಿಬಿ ಡೇಟಾಗೆ 51 ರೂ. ದರವಿದ್ದು ಇದು 61 ರೂ.ಗೆ ಏರಿಕೆಯಾಗಲಿದೆ. 12 ಜಿಬಿ ಡೇಟಾ ದರ 101 ರೂ.ನಿಂದ 121 ರೂ.ಗೆ, 50 ಜಿಬಿ ಡೇಟಾ ದರ 251 ರೂ.ನಿಂದ 301 ರೂ.ಗೆ ಹೆಚ್ಚಳವಾಗಲಿದೆ.

ABOUT THE AUTHOR

...view details