ಜಮ್‌ಶೆಡ್‌ಪುರ (ಜಾರ್ಖಂಡ್):ಜಾರ್ಖಂಡ್‌ನ ಜಮ್ಶೆಡ್ಪುರದ ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಂದು ಶವವನ್ನು ಐದು ದಿನಗಳ ಕಾಲ ಮನೆಯಲ್ಲಿಯೇ ಮುಚ್ಚಿ ಇಟ್ಟಿರುವ ಘಟನೆ ಜಾರ್ಖಂಡ್‌ನ ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಮಹಿಳೆ ವಶಕ್ಕೆ ಪಡೆದ ಪೊಲೀಸರು:ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಸ್ಥಳೀಯರು ಈ ಬಗ್ಗೆ ಮಾಹಿತಿ ಪಡೆದು, ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮೃತರನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ರಿಯಲ್ ಎಸ್ಟೇಟ್ ಉದ್ಯಮಿ. ಉಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ಕಾಲೋನಿಯ ರಸ್ತೆ ಸಂಖ್ಯೆ ಮೂರರಲ್ಲಿ ವಾಸವಾಗಿದ್ದರು. ಅವರು ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಕಾಣಿಸುತ್ತಿರಲಿಲ್ಲ.
ಇದನ್ನೂ ಓದಿ:ಬಿಸಿ ಟೀ ತರಲಿಲ್ಲ ಎಂದು ಗದರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ..
ಮನೆ ಸುತ್ತ ವಿದ್ಯುತ್ ತಂತಿ ಬೇಲಿಗೆ ಅಳವಡಿಸಿದ್ದ ಮಹಿಳೆ:ಅಮರನಾಥ್ ಸಿಂಗ್ ನೆರೆಹೊರೆಯವರು, ಅವರ ಮನೆಗೆ ಹೋಗಿ ಮೃತರ ಪತ್ನಿಯಲ್ಲಿ ಅವರ ಬಗ್ಗೆ ವಿಚಾರಿಸಿದ್ದಾರೆ. ಆದ್ರೆ, ಸಿಂಗ್ ಅವರ ಪತ್ನಿ ಮೀರಾ, ನೆರೆಹೊರೆಯವರ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಲಿಲ್ಲ. ಬದಲಿಗೆ ಎಲ್ಲರನ್ನೂ ಗದರಿಸಿ ಓಡಿಸಿದರು. ಸ್ಥಳೀಯರು ಅನುಮಾನಗೊಂಡು ಪುಣೆಯಲ್ಲಿ ವಾಸಿಸುವ ಸಿಂಗ್ ಅವರ ಮಗನಿಗೆ ವಿಷಯ ತಿಳಿಸಿದ್ದಾರೆ. ನೆರೆಹೊರೆಯವರು ಮನೆಗೆ ನುಸುಳದಂತೆ ತಡೆಯಲು ಸಿಂಗ್ ಅವರ ಪತ್ನಿ ಮನೆಯ ಸುತ್ತ ವಿದ್ಯುತ್ ತಂತಿ ಬೇಲಿಗೆ ಅಳವಡಿಸಿದ್ದರು ಎಂದು ಸ್ಥಳೀಯರು ಆರೋಪಿದ್ದಾರೆ.