ರಾಂಚಿ (ಜಾರ್ಖಂಡ್):ಒಂದು ಕಡೆ ಇಡೀ ದೇಶ ಸಾಂಪ್ರದಾಯಿಕ ಸಂಭ್ರಮದಿಂದ ದುರ್ಗಾಪೂಜೆ ಹಬ್ಬದ ಆಚರಣೆಯಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಇದು ಜಾರ್ಖಂಡ್‌ನ ಬುಡಕಟ್ಟು ಸಮುದಾಯವೊಂದಕ್ಕೆ ಇದು ಶೋಕದ ಸಮಯವಾಗಿದೆ. ರಾಕ್ಷಸ ಮಹಿಷಾಸುರನ ವಂಶಕ್ಕೂ ತಮಗೂ ಸಂಬಂಧವಿದೆ ಎಂದು ನಂಬುವ ಈ ಬುಡಕಟ್ಟು ಸಮುದಾಯಕ್ಕೆ ಇದು ಶೋಕದ ಸಮಯವಾಗಿರುವುದು ಸತ್ಯ. ಕೆಲವು ಜಾರ್ಖಂಡ್ ಬುಡಕಟ್ಟು ಸಮುದಾಯದವರು ಮಹಿಷಾಸುರ ಕುಲಕ್ಕೆ ನಿಷ್ಠೆಯನ್ನು ಹೊಂದಿದ್ದಾರೆ ಮತ್ತು ಅವರು ಅವನನ್ನು ತಮ್ಮ ದೇವತೆಯಾಗಿ ಪರಿಗಣಿಸುತ್ತಾರೆ.
ಅವರ ಪಾಲಿಗೆ ಮಹಿಷಾಸುರನು ನಿಜವಾದ ರಾಜನಾಗಿದ್ದನು. ಆತ ಭೂಮಿಯನ್ನು ಆಳಿದನು ಮತ್ತು ದುರ್ಗಾದೇವಿಯಿಂದ ಕೊಲ್ಲಲ್ಪಟ್ಟನು. ಮಹಿಷಾಸುರ ವಂಶಕ್ಕೆ ಸೇರಿದ ಬುಡಕಟ್ಟು ಸಮುದಾಯದವರು ಅವರನ್ನು 'ಹುದುದ್ ದುರ್ಗ' ಎಂದು ಪೂಜಿಸುತ್ತಾರೆ. 10 ದಿನಗಳ ನವರಾತ್ರಿ ಉತ್ಸವದಲ್ಲಿ, ಅವರು ಮಹಿಷಾಸುರನ ವಧೆಗೆ ಶೋಕಿಸುತ್ತಾರೆ. ಜಾರ್ಖಂಡ್‌ನ ಈ ಬುಡಕಟ್ಟು ಸಮುದಾಯದ ಜನರು ನವರಾತ್ರಿಯ ಸಮಯದಲ್ಲಿ ಮಂಗಳಕರ ಆಚರಣೆಗಳನ್ನು ಮಾಡುವುದಿಲ್ಲ ಮತ್ತು ತಮ್ಮ ಮನೆಗಳಿಂದ ಹೊರಗೆ ಹೋಗುವುದಿಲ್ಲ.