ಕರ್ನಾಟಕ

karnataka

ETV Bharat / bharat

ಶಿಫಾರಸು ಜಾರಿಯಾದರೆ ದೇಶದಲ್ಲೇ ಅತೀ ಹೆಚ್ಚು ಸಂಬಳ ಪಡೆಯಲಿದ್ದಾರೆ ಈ ರಾಜ್ಯದ ಎಂಎಲ್​ಎಗಳು..! ಯಾವುದಾ ರಾಜ್ಯ? - ಜಾರ್ಖಂಡ್ ಶಾಸಕರ ಒಟ್ಟು ವೇತನ ಮತ್ತು ಭತ್ಯೆ

ಜಾರ್ಖಂಡ್​ ಶಾಸಕರ ವೇತನ ಹೆಚ್ಚಳ ವರದಿಯನ್ನು ಸ್ಪೀಕರ್​ಗೆ ಸಲ್ಲಿಸಲಾಗಿದ್ದು, ಈ ಶಿಫಾರಸು ಜಾರಿಯಾದ್ರೆ ಶಾಸಕರು ದೇಶದಲ್ಲೇ ಅತೀ ಹೆಚ್ಚು ಸಂಬಳ ಪಡೆಯಲಿದ್ದಾರೆ.

Jharkhand MLAs set to get monthly salary  highest in country  MLAs set to get monthly salary  ಜಾರ್ಖಂಡ್​ ಶಾಸಕರ ವೇತನ ಹೆಚ್ಚಳ ವರದಿ  ದೇಶದಲ್ಲೇ ಅತೀ ಹೆಚ್ಚು ಸಂಬಳ ಪಡೆಯಲಿರುವ ಎಂಎಲ್​ಎಗಳು  ಶಾಸಕರು ದೇಶದಲ್ಲೇ ಅತೀ ಹೆಚ್ಚು ಸಂಬಳ  ಸ್ಪೀಕರ್ ರವೀಂದ್ರ ನಾಥ್ ಮಹತೋ  ವಿಧಾನಸಭೆ ರಚಿಸಿದ ವೇತನ ಹೆಚ್ಚಳದ ವಿಶೇಷ ಸಮಿತಿ  ಜಾರ್ಖಂಡ್ ಶಾಸಕರ ಒಟ್ಟು ವೇತನ ಮತ್ತು ಭತ್ಯೆ  ವಿಧಾನಸಭೆಯ ಬಜೆಟ್ ಅಧಿವೇಶನ
ಜಾರ್ಖಂಡ್​ ಶಾಸಕರ ವೇತನ ಹೆಚ್ಚಳ ವರದಿ

By

Published : Aug 5, 2023, 12:17 PM IST

ರಾಂಚಿ, ಜಾರ್ಖಂಡ್​:ಸ್ಪೀಕರ್ ರವೀಂದ್ರ ನಾಥ್ ಮಹತೋ ಅವರಿಗೆ, ವಿಧಾನಸಭೆಯಿಂದ ರಚಿಸಲಾಗಿದ್ದ ವೇತನ ಹೆಚ್ಚಳದ ವಿಶೇಷ ಸಮಿತಿ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿ ಪ್ರಕಾರ ಜಾರ್ಖಂಡ್ ಶಾಸಕರ ಒಟ್ಟು ವೇತನ ಮತ್ತು ಭತ್ಯೆಗಳು ಗಮನಾರ್ಹವಾಗಿ ಹೆಚ್ಚಾಗಲಿವೆ. ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಶಾಸಕರು ಮಾಸಿಕ ವೇತನ ಮತ್ತು ಭತ್ಯೆಯೊಂದಿಗೆ 2.88 ಲಕ್ಷ ರೂ.ಗಳ ವೇತನ ಪಡೆಯಲಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಶಾಸಕರಾಗಲಿದ್ದಾರೆ . ಪ್ರಸ್ತುತ ತೆಲಂಗಾಣದ ಶಾಸಕರು ತಿಂಗಳಿಗೆ ಗರಿಷ್ಠ 2.50 ಲಕ್ಷ ರೂ. ಪಡೆಯುತ್ತಿದ್ದಾರೆ.

ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ವೇತನ ಹೆಚ್ಚಳದ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಈ ಪ್ರಸ್ತಾವನೆಯನ್ನು ಆಧರಿಸಿ ಐವರು ಶಾಸಕರ ವಿಶೇಷ ಸಮಿತಿಯನ್ನು ರಚಿಸಲಾಗಿತ್ತು. ಈಗ ಆ ಸಮಿತಿ ತನ್ನ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿದೆ. ಸಮಿತಿಯ ನೇತೃತ್ವವನ್ನು ಬಿಜೆಪಿಯ ಹಿರಿಯ ಶಾಸಕ ರಾಮಚಂದ್ರ ಚಂದ್ರವಂಶಿ ವಹಿಸಿದ್ದರು. ಇತರ ನಾಲ್ಕು ಸದಸ್ಯರು ಕಾಂಗ್ರೆಸ್‌ನ ಪ್ರದೀಪ್ ಯಾದವ್, ದೀಪಿಕ್ ಪಾಂಡೆ ಸಿಂಗ್, ಜೆಎಂಎಂನ ಸಮೀರ್ ಕುಮಾರ್ ಮೊಹಂತಿ ಮತ್ತು ಬಿಜೆಪಿಯ ಭಾನುಪ್ರತಾಪ್ ಶಾಹಿ ಇದ್ದರು.

ವಿಶೇಷ ಸಮಿತಿಯ ವರದಿಯ ಬಗ್ಗೆ ಆಡಳಿತ ಪಕ್ಷದಿಂದ ಪ್ರತಿಪಕ್ಷದವರೆಗೆ ಶಾಸಕರು ಒಮ್ಮತದಿಂದ ಕೂಡಿರುವುದರಿಂದ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ. ಇದು ಏಳನೇ ಬಾರಿ ಜಾರ್ಖಂಡ್‌ನ ಶಾಸಕರ ವೇತನ ಹೆಚ್ಚಳವಾಗಲಿದೆ. 2017ರಲ್ಲಿ ಅಂದಿನ ಸಿಎಂ ರಘುವರ್ ದಾಸ್ ಸರ್ಕಾರದ ಅವಧಿಯಲ್ಲಿ ಕೊನೆಯ ಬಾರಿಗೆ ವೇತನ ಹೆಚ್ಚಳ ಮಾಡಲಾಗಿತ್ತು. 2017ರಲ್ಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಶೇ.33ರಷ್ಟು ಹೆಚ್ಚಿಸಿ ಆದೇಶ ಹೊರಡಿಸಲಾಗಿತ್ತು.

2001ರಲ್ಲಿ ಜಾರ್ಖಂಡ್‌ನ ಶಾಸಕರು ಕೇವಲ 19,800 ರೂಪಾಯಿ ವೇತನ ಮತ್ತು ಭತ್ಯೆಯಾಗಿ ಪಡೆಯುತ್ತಿದ್ದರು. ಈಗ ಹೊಸ ವೇತನ ಜಾರಿಯಾದ ಬಳಿಕ ಅವರು 2001 ರಲ್ಲಿ ಪಡೆಯುತ್ತಿದ್ದ ಹಣಕ್ಕಿಂತ ಸುಮಾರು 14 ಪಟ್ಟು ಹೆಚ್ಚು ಹಣವನ್ನು ಪಡೆದಂತಾಗುತ್ತದೆ.

ದೆಹಲಿಯಲ್ಲಿ ಶಾಸಕರ ವೇತನ ಎಷ್ಟು ಗೊತ್ತಾ?:ದೆಹಲಿಯಲ್ಲಿ ಶಾಸಕರ ವೇತನ ಮತ್ತು ಭತ್ಯೆ ಸೇರಿ ಸುಮಾರು 95,000 ರೂಪಾಯಿ ಇದೆ. ದೆಹಲಿಯ ತಲಾ ಆದಾಯ ರೂ 4.45 ಲಕ್ಷ ಮತ್ತು ತಲಾ ಸಾಲ ರೂ 19,571 ಆಗಿದ್ದರೆ, ಜಾರ್ಖಂಡ್‌ನಲ್ಲಿ ತಲಾ ಆದಾಯ 91,000 ರೂ. ಮತ್ತು ತಲಾ ಸಾಲ 30,000 ರೂ. ಆಗಿದೆ. ಈ ದೃಷ್ಟಿಯಿಂದಲೂ ಜಾರ್ಖಂಡ್‌ನ ಶಾಸಕರು ದೆಹಲಿಗಿಂತ ಮುಂದಿದ್ದಾರೆ. ಇದು ಮಾತ್ರವಲ್ಲದೇ ದೇಶದ ಬಹುತೇಕ ರಾಜ್ಯಗಳಿಗಿಂತಲೂ ಜಾರ್ಖಂಡ್​ ಶಾಸಕರು ಮುಂದಿದ್ದಾರೆ.

ಶಾಸಕರ ವೇತನ ಹೆಚ್ಚಳ ಸಮಿತಿ ಮಾಡಿರುವ ಶಿಫಾರಸುಗಳಿವು:ವಿಶೇಷ ಸಮಿತಿಯು, ಮಾಜಿ ಸ್ಪೀಕರ್‌ಗಳಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಅವರಿಗೆ ಎಫ್​ ಮಾದರಿಯ ದೊಡ್ಡ ನಿವಾಸಗಳು, ಒಬ್ಬ ತುರ್ತು ಕಾರ್ಯದರ್ಶಿ, ಇಬ್ಬರು ವಾಡಿಕೆಯ ಗುಮಾಸ್ತರು, ಇಬ್ಬರು ಸಹಾಯಕರು, ಒಬ್ಬ ಕಾರು ಚಾಲಕ ಮತ್ತು ತಿಂಗಳಿಗೆ 300 ಲೀಟರ್ ಇಂಧನವನ್ನು ಒದಗಿಸಲು ಸಮಿತಿ ಶಿಫಾರಸು ಮಾಡಿದೆ. ಶಾಸಕರಿಗೆ ಮಾಸಿಕ 60,000 ರೂಪಾಯಿ ವೇತನ ನೀಡಲು ಸಮಿತಿ ಶಿಫಾರಸು ಮಾಡಿದೆ.

ಸಮಿತಿಯು ಲೇಖನ ಸಾಮಗ್ರಿಗಳಿಗಾಗಿ ಮಾಸಿಕ 10,000 ರೂ., ರಾಜ್ಯದಲ್ಲಿ ರೂ 2,000 ಮತ್ತು ರಾಜ್ಯದ ಹೊರಗೆ ರೂ 2,500 ದೈನಂದಿನ ಭತ್ಯೆ, ದೂರವಾಣಿ, ಮೊಬೈಲ್ ಮತ್ತು ಇಂಟರ್ನೆಟ್‌ಗೆ ವಾರ್ಷಿಕ ರೂ 1 ಲಕ್ಷ ರೂಪಾಯಿ, ಉಪಕರಣ ಮತ್ತು ವಸತಿಗಾಗಿ ವಾರ್ಷಿಕ 3 ಲಕ್ಷ ರೂ., ರೈಲು, ವಿಮಾನ ಮತ್ತು ರಸ್ತೆ ಸಾರಿಗೆಗಾಗಿ 60,000 ರೂ.ಗಳ ಕೂಪನ್, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಭತ್ಯೆ ಮಾಸಿಕ ರೂ 3,000, ವೈಯಕ್ತಿಕ ಸಹಾಯಕ್ಕಾಗಿ ಮಾಸಿಕ 15,000 ರೂ., ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗೆ 1 ಲಕ್ಷ ರೂ. ಮತ್ತು ಆಪ್ತ ಸಹಾಯಕರಿಗೆ ಮಾಸಿಕ 50,000 ರೂ. ವೇತನ ನೀಡಲು ಸಮಿತಿ ಶಿಫಾರಸು ಮಾಡಿದೆ.

ಇದಲ್ಲದೇ 20 ಲಕ್ಷ ರೂ.ವರೆಗೆ ಕಾರು ಸಾಲ ಮತ್ತು 40 ಲಕ್ಷ ರೂ.ವರೆಗಿನ ಗೃಹ ಸಾಲವನ್ನು ಶೇ.4 ಬಡ್ಡಿ ದರದಲ್ಲಿ ನೀಡುವಂತೆ ಸಮಿತಿ ಶಿಫಾರಸು ಮಾಡಿದೆ. ಸಮಿತಿಯು ಶಿಫಾರಸು ಮಾಡಿದ ಇತರ ಹಲವಾರು ಪ್ರಯೋಜನಗಳಲ್ಲಿ ರಾಜ್ಯ ಸರ್ಕಾರದಿಂದ ಪಾವತಿಸಬೇಕಾದ ಶಾಸಕರ ಆದಾಯ ತೆರಿಗೆ, ದೆಹಲಿಯ ಜಾರ್ಖಂಡ್ ಭವನದಲ್ಲಿ ದಿನಕ್ಕೆ 100 ರೂ.ಗೆ ಕೊಠಡಿ, ಐಎಎಸ್ ಅಧಿಕಾರಿಯಂತೆಯೇ ವೈದ್ಯಕೀಯ ಭತ್ಯೆ ಮತ್ತು ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ವಸತಿ ನೀಡಲು ಸಮಿತಿ ತನ್ನ ವರದಿಯಲ್ಲಿ ಸೂಚಿಸಿದೆ.

ಓದಿ:'ಬಾಕಿ ವೇತನ 45 ದಿನದೊಳಗೆ ಪಾವತಿ': ದಿನೇಶ್ ಗುಂಡುರಾವ್​ ಭರವಸೆ.. ಪ್ರತಿಭಟನೆ ಕೈಬಿಟ್ಟ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ

ABOUT THE AUTHOR

...view details