ಕರ್ನಾಟಕ

karnataka

ETV Bharat / bharat

ಹಲ್ಲುಜ್ಜುವ ಕಡ್ಡಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ.. ಚಾಕುವಿನಿಂದ ಇರಿದು ಓರ್ವನ ಹತ್ಯೆ.. - ಹಲ್ಲು ಉಜ್ಜುವ ಕಡ್ಡಿ

ಘಟನೆ ಬಳಿಕ ಆರೋಪಿ ತರುಣ್ ಲೋಹ್ರಾನನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾದ ಚಾಕುವನ್ನು ಜಪ್ತಿ ಮಾಡಲಾಗಿದೆ. ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ..

jharkhand-man-killed-after-fight-over-teeth-cleaning-twig
ಹಲ್ಲುಜ್ಜುವ ಕಡ್ಡಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ..ಚಾಕುವಿನಿಂದ ಇರಿದು ಓರ್ವನ ಹತ್ಯೆ

By

Published : Oct 15, 2021, 4:45 PM IST

ರಾಂಚಿ(ಜಾರ್ಖಂಡ್) :ಹಲ್ಲು ಉಜ್ಜುವ ಕಡ್ಡಿಯನ್ನ ಮರದಿಂದ ಕಿತ್ತುಕೊಳ್ಳುವ ವಿಚಾರಕ್ಕೆ ಆರಂಭವಾದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಜಾರ್ಖಂಡ್​​ನ ತಮಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮರದಲ್ಲಿ ಕಡ್ಡಿ ಮುರಿಯುವ ವಿಚಾರವಾಗಿ ಜಗಳ ಆರಂಭವಾಗಿ ಆರೋಪಿ ತರುಣ್ ಮಹತೋ ಎಂಬಾತ ಹರ್ದನ್ ಲೋಹ್ರಾನಿಗೆ ಚಾಕುವಿನಿಂದು ಇರಿದಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ತಮಡ್ ಠಾಣೆ ಡಿಎಸ್​​​ಪಿ ಅಜಯ್​​ ಕುಮಾರ್​​, ಬೆಳಗ್ಗೆ ಹಲ್ಲು ಉಜ್ಜುವ ಉದ್ದೇಶದಿಂದ ಮರದಿಂದ ಕಡ್ಡಿ ಮುರಿದುಕೊಳ್ಳುವ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಬಳಿಕ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಇದರಿಂದ ಸಿಟ್ಟಿಗೆದ್ದ ತರುಣ್, ಹರ್ದನ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆ ಬಳಿಕ ಹರ್ದನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಾಗಲೇ ಅವರು ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಆರೋಪಿ ತರುಣ್ ಲೋಹ್ರಾನನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಲಾದ ಚಾಕುವನ್ನು ಜಪ್ತಿ ಮಾಡಲಾಗಿದೆ. ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಫೋನ್​ನಲ್ಲಿ ಬ್ಯುಸಿ: ಮಗುವಿನೊಂದಿಗೆ ಮ್ಯಾನ್​​ಹೋಲ್​​ನಲ್ಲಿ ಬಿದ್ದ ಮಹಿಳೆ!

ABOUT THE AUTHOR

...view details