ಕರ್ನಾಟಕ

karnataka

ETV Bharat / bharat

ಕೌಟುಂಬಿಕ ಕಲಹ: ಮಗು ಸೇರಿ ಒಂದೇ ಕುಟುಂಬದ ಐವರ ಕೊಲೆ - ಕುಟುಂಬದ ಐವರ ಕೊಲೆ

ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ಐವರ ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

Jharkhand family murder
Jharkhand family murder

By

Published : Feb 24, 2021, 3:37 PM IST

ಗುಮ್ಲಾ( ಜಾರ್ಖಂಡ್):ಕುಟುಂಬದಲ್ಲಿ ಕಲಹದಿಂದಾಗಿ ಒಂದೇ ಕುಟುಂಬದ ಐವರ ಕೊಲೆ ಮಾಡಿರುವ ದುರ್ಘಟನೆ ಜಾರ್ಖಂಡ್​ನ ಗುಮ್ಲಾದಲ್ಲಿ ನಡೆದಿದ್ದು, ಮಗು ಕೂಡ ಘಟನೆಯಲ್ಲಿ ಸಾವಿಗೀಡಾಗಿದೆ.

ಮಗು ಸೇರಿ ಒಂದೇ ಕುಟುಂಬದ ಐವರ ಕೊಲೆ

ಕೊಲೆಯಾಗಿರುವುದು ಬುಡಕಟ್ಟು ಜನಾಂಗ ಎಂದು ತಿಳಿದು ಬಂದಿದ್ದು, ಕೊಡಲಿಯಿಂದ ಕೊಚ್ಚಿ ಇವರ ಮರ್ಡರ್​ ಮಾಡಲಾಗಿದೆ. ಮೃತರನ್ನ ನಿಕೋಡಿನ್ ಟೊಪ್ನೊ, ಭೀಮ್ಸೆನ್ ಟೊಪ್ನೊ, ಶಿಲ್ವಂತಿ ಟೋಪ್ನೊ, ಅಲ್ಬಿಸ್ ಟೊಪ್ನೊ ಮತ್ತು ಐದು ವರ್ಷದ ಮಗು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿ ಪಕ್ಷ ಸೇರಿದ ಕ್ರಿಕೆಟರ್​ ಮನೋಜ್ ತಿವಾರಿ!

ಕುಟುಂಬದಲ್ಲಿ ವೈಯಕ್ತಿಕ ಕಲಹದಿಂದಾಗಿ ಈ ಕೊಲೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದೆ. ಜತೆಗೆ ಗ್ರಾಮದಲ್ಲಿ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ತನಿಖೆ ನಡೆಯುತ್ತಿದ್ದು, ಪ್ರಕರಣ ದಾಖಲಾಗಿದೆ.

ABOUT THE AUTHOR

...view details