ಕರ್ನಾಟಕ

karnataka

ETV Bharat / bharat

ತೆಲಂಗಾಣ ಸಿಎಂ ಭೇಟಿಯಾದ ಜಾರ್ಖಂಡ್ ಸಿಎಂ: ಶೀಘ್ರದಲ್ಲೇ ಬಿಜೆಪಿಯೇತರ ಸಿಎಂಗಳ ಸಭೆಗೆ ನಿರ್ಧಾರ - non-BJP CMs meeting soon

ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಒಗ್ಗೂಡಿ ಕೇಂದ್ರ ಸರ್ಕಾರವನ್ನು ವಿರೋಧಿಸಲು ಶೀಘ್ರದಲ್ಲೇ ಬಿಜೆಪಿಯೇತರ ಸಿಎಂಗಳ ಸಭೆ ನಡೆಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿಯಾದ ಹೇಮಂತ್ ಸೊರೇನ್ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

Jharkhand CM Soren meets Telangana CM KCR .. They Decided Conduct A meeting of non-BJP CMs soon
ತೆಲಂಗಾಣ ಸಿಎಂ ಭೇಟಿಯಾದ ಜಾರ್ಖಂಡ್ ಸಿಎಂ: ಶೀಘ್ರದಲ್ಲೇ ಬಿಜೆಪಿಯೇತರ ಸಿಎಂಗಳ ಸಭೆಗೆ ನಿರ್ಧಾರ

By

Published : Apr 29, 2022, 10:03 AM IST

ಹೈದರಾಬಾದ್: ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಸಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿಯಾದ ಹೇಮಂತ್ ಸೊರೇನ್ ಶೀಘ್ರದಲ್ಲೇ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳು ಒಗ್ಗೂಡಿ ಕೇಂದ್ರ ಸರ್ಕಾರವನ್ನು ವಿರೋಧಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಕುಟುಂಬ ಸದಸ್ಯರೊಂದಿಗೆ ಹೈದರಾಬಾದ್​ಗೆ ಆಗಮಿಸಿದ ಜಾರ್ಖಂಡ್ ಸಿಎಂ ಸೊರೇನ್ ಸಂಜೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ, ಸಭೆಯೊಂದು ನಡೆದಿದ್ದು, ಟಿಆರ್‌ಎಸ್ ಕಾರ್ಯಾಧ್ಯಕ್ಷರೂ ಆದ ಸಚಿವ ಕೆಟಿಆರ್ ಕೂಡ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ಸುಮಾರು ಮೂರು ಗಂಟೆಗಳ ಕಾಲ ಇಬ್ಬರೂ ರಾಷ್ಟ್ರ ರಾಜಕಾರಣ, ಕೇಂದ್ರ ಸರ್ಕಾರದ ಧೋರಣೆ, ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹಿಂದಿನ ತಿಂಗಳು ಕೆಸಿಆರ್ ಅವರು ಸೋರೆನ್ ಅವರನ್ನು ಭೇಟಿಯಾಗಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ ವಿಚಾರ.

'ನಾಚಿಕೆಗೇಡಿನ ಸಂಗತಿ':ತಮ್ಮದೇ ಅಜೆಂಡಾ ಮುಂದಿಟ್ಟುಕೊಂಡು ದೇಶದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಪ್ರಧಾನಿ ಮೋದಿ ಸೃಷ್ಟಿಸುತ್ತಿದ್ದಾರೆ. ಅವರು ತೆಗೆದುಕೊಳ್ಳುತ್ತಿರುವ ಯಾವುದೇ ನಿರ್ಧಾರ ಜನರ ಪರವಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಕ್ಷವನ್ನು ಗೆಲ್ಲಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಹೊಣೆ. ಜನರ ಮೇಲೆ ಸೆಸ್ ರೂಪದಲ್ಲಿ ಭಾರಿ ಹೊರೆ ಹೊರಿಸಿದೆ. ರಾಜ್ಯಗಳು ತೆರಿಗೆ ಕಡಿತಗೊಳಿಸಬೇಕು ಎಂದು ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಕೆಸಿಆರ್ ವ್ಯಂಗ್ಯವಾಡಿದ್ದಾರೆ.

ಕೆಸಿಆರ್ ಮತ್ತು ಹೇಮಂತ್​ ಸೊರೇನ್ ಸಭೆ

ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ವೇಳೆ ಇಂಧನ ಬೆಲೆ ಏರಿಕೆಯಾಗದಿರಲು ಕಾರಣವೇನು? ಎಂಬುದಕ್ಕೆ ಮೋದಿ ರಾಷ್ಟ್ರಕ್ಕೆ ಉತ್ತರ ನೀಡಬೇಕು. ಮೋದಿ ಜನರ ಕ್ಷೇಮಾಭಿವೃದ್ಧಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದು ತೆಲಂಗಾಣದ ಭತ್ತ ಬೆಳೆಯುವ ರೈತರ ಸಮಸ್ಯೆಯ ಸಂದರ್ಭದಲ್ಲಿ ಸಾಬೀತಾಗಿದೆ ಎಂದು ಕೆಸಿಆರ್ ಕಿಡಿಕಾರಿದ್ದಾರೆ.

'ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೋಮುಗಲಭೆ':ಮೋದಿಗೆ ಕೇವಲ ಅಧಿಕಾರ ದಾಹವಿದೆ. ಸೇವಾ ಮನೋಭಾವ ಇಲ್ಲ ಎಂದು ಹೇಮಂತ್ ಸೊರೆನ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪ್ರಧಾನಿ ಇರುವುದು ದೇಶಕ್ಕೆ ಒಳ್ಳೆಯದಲ್ಲ. ಕೇಂದ್ರ ಸರ್ಕಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಧಾರ್ಮಿಕ ಸಮಸ್ಯೆಗಳು ಉದ್ಭವಿಸುವಂತೆ ಮಾಡುತ್ತಿದೆ. ರಾಜ್ಯಗಳಿಗೆ ಹಾನಿ ಮಾಡುವ ಕೇಂದ್ರ ಸರ್ಕಾರದ ಧೋರಣೆಯನ್ನು ಎದುರಿಸಲು ಸಮಗ್ರ ಕ್ರಮದ ಅಗತ್ಯವಿದೆ ಎಂದು ಸೊರೇನ್ ಅಭಿಪ್ರಾಯಪಟ್ಟಿದ್ದಾರೆ.

ಇಷ್ಟೇ ಅಲ್ಲದೇ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಈಗಿನ ಪರಿಸ್ಥಿತಿ ಕುರಿತು ಕೂಡಾ ಚರ್ಚೆ ನಡೆಸಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂದು ಸಿಎಂ ಕೆಸಿಆರ್ ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಪ್ರಶಾಂತ್ ಕಿಶೋರ್ ಬಗ್ಗೆಯೂ ಕೂಡಾ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ನಡೆಸಲು ಇಬ್ಬರೂ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ದೇಶವನ್ನು ಸೆಮಿಕಂಡಕ್ಟರ್ ಹಬ್ ಆಗಿಸುವ ಯತ್ನ: ಬೆಂಗಳೂರಿನಲ್ಲಿ ಸೆಮಿಕಾನ್ ​ಇಂಡಿಯಾ ಉದ್ಘಾಟಿಸಲಿರುವ ಪ್ರಧಾನಿ

ABOUT THE AUTHOR

...view details