ಕರ್ನಾಟಕ

karnataka

ETV Bharat / bharat

ಎಟಿಸಿಗೆ ನುಗ್ಗಿ ನಿಷೇಧಿತ ರಾತ್ರಿ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಬಿಜೆಪಿ ಸಂಸದ

ರಾತ್ರಿ ವೇಳೆ ವಿಮಾನ ಹಾರಾಟ ನಿಷೇಧವಿದ್ದರೂ ಅಧಿಕಾರಿಗಳನ್ನು ಬೆದರಿಸಿ ಬಲವಂತವಾಗಿ ಅನುಮತಿ ಪಡೆಯಲು ಏರ್​ ಟ್ರಾಫಿಕ್​ ಕಂಟ್ರೋಲ್​ ಕೇಂದ್ರಕ್ಕೆ ಬಿಜೆಪಿ ಸಂಸದ ನುಗ್ಗಿದ್ದಾರೆ. ಈ ಬಗ್ಗೆ ಅವರ ವಿರುದ್ಧ ದೂರು ದಾಖಲಾಗಿದೆ.

jharkhand-bjp-mp
ಎಟಿಸಿಗೆ ನುಗ್ಗಿ ನಿಷೇಧಿತ ರಾತ್ರಿ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಬಿಜೆಪಿ ಸಂಸದ

By

Published : Sep 3, 2022, 7:18 PM IST

ದಿಯೋಘರ್(ಜಾರ್ಖಂಡ್​):ರಾಜಕಾರಣಿಗಳಿಗೆ ಅಧಿಕಾರದ ಮದ ಏನು ಬೇಕಾದರೂ ಮಾಡಿಸುತ್ತದೆ. ವಿಮಾನ ನಿಲ್ದಾಣ ಸೂಕ್ಷ್ಮ ಪ್ರದೇಶವಾದರೂ ಲೆಕ್ಕಿಸದೇ ಜಾರ್ಖಂಡ್​ ಸಂಸದರೊಬ್ಬರು ರಾತ್ರಿ ಪ್ರಯಾಣಕ್ಕಾಗಿ ಏರ್​ ಟ್ರಾಫಿಕ್​ ಕಂಟ್ರೋಲ್​(ಎಟಿಸಿ) ರೂಮಿಗೆ ನುಗ್ಗಿ ಅಧಿಕಾರಿಗಳನ್ನು ಬಲವಂತವಾಗಿ ಒಪ್ಪಿಸಿ ವಿಮಾನದಲ್ಲಿ ಪಯಣಿಸಿದ್ದಾರೆ. ಈ ಬಗ್ಗೆ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಜಾರ್ಖಂಡ್ ಬಿಜೆಪಿ ನಾಯಕ ಮತ್ತು ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಮತ್ತು ಅವರ ಇಬ್ಬರು ಪುತ್ರರಾದ ಕನಿಷ್ಕಾಂತ್ ದುಬೆ ಮತ್ತು ಮಹಿಕಾಂತ್ ದುಬೆ, ಇನ್ನೊಬ್ಬ ಸಂಸದ ಮನೋಜ್ ತಿವಾರಿ ಜೊತೆಗೂಡಿ ದುಮ್ಕಾದಲ್ಲಿ ಆಗಸ್ಟ್​ 31 ರಂದು ಬಾಲಕಿಯನ್ನು ಬೆಂಕಿ ಹಚ್ಚಿ ಸುಟ್ಟ ಘಟನಾ ಸ್ಥಳಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ರಾತ್ರಿ ವೇಳೆ ಬಂದಿದ್ದಾರೆ.

ಭದ್ರತೆಯ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಚಾರ ನಿರ್ಬಂಧಿಸಿದ ಬಗ್ಗೆ ಅಧಿಕಾರಿಗಳು ಅನುಮತಿಗೆ ನಿರಾಕರಿಸಿದ್ದಾರೆ. ಆದರೆ, ಅಧಿಕಾರದ ಮದದಲ್ಲಿದ್ದ ಬಿಜೆಪಿ ಸಂಸದ ತನ್ನಿಬ್ಬರು ಮಕ್ಕಳ ಸಮೇತ ಎಟಿಆಸಿ ಕೇಂದ್ರಕ್ಕೆ ನುಗ್ಗಿ ಅಲ್ಲಿದ್ದ ಅಧಿಕಾರಿಗಳನ್ನು ವಿಮಾನ ಹಾರಾಟಕ್ಕೆ ಬಲವಂತ ಮಾಡಿ ಅನುಮತಿ ಪಡೆದುಕೊಂಡಿದ್ದಾರೆ.

ಎಟಿಸಿಗೆ ಯಾವುದೇ ಅಧಿಕಾರಿಗೆ ಅನುಮತಿ ಇರುವುದಿಲ್ಲ. ಪ್ರೋಟೋಕಾಲ್​ ಉಲ್ಲಂಘನೆ ಮತ್ತು ಎಟಿಸಿ​ಗೆ ಅಕ್ರಮವಾಗಿ ಒಳನುಗ್ಗಿದ ಸಂಸದ, ಆತನ ಇಬ್ಬರು ಪುತ್ರರು ಇದಕ್ಕೆ ಸಹಾಯ ಮಾಡಿದ ವಿಮಾನ ನಿಲ್ದಾಣದ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಎಫ್‌ಐಆರ್ ಹಾಕಲಾಗಿದೆ.

ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಹಾರಾಟವನ್ನು ನಿಷೇಧಿಸಿದ್ದರೂ ವಿಮಾನಕ್ಕಾಗಿ ಸಂಸದ ದುಬೆ ಮತ್ತು ಇತರರು ವಿಮಾನ ನಿಲ್ದಾಣದ ನಿರ್ದೇಶಕರಿಂದ ಅನುಮತಿ ಪಡೆದಿದ್ದಾರೆ. ಪ್ರೋಟೋಕಾಲ್ ಉಲ್ಲಂಘಿಸಿ ವಿಮಾನ ನಿಲ್ದಾಣದ ಎಟಿಸಿ ಕೊಠಡಿಯನ್ನೂ ಪ್ರವೇಶಿಸಲಾಗಿದೆ. ಈ ಬಗ್ಗೆ ಕ್ರಮ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಿಯೋಘರ್ ವಿಮಾನ ನಿಲ್ದಾಣದ ಭದ್ರತೆಯ ಉಸ್ತುವಾರಿ ವಹಿಸಿರುವ ಡಿಎಸ್‌ಪಿ ಸುಮನ್ ಆನಂದ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರಾಜಕೀಯ ವಾಕ್ಸಮರಕ್ಕೆ ಹಾದಿ:ಇನ್ನು ಘಟನೆಯು ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ. ಪ್ರೋಟೋಕಾಲ್​ ಉಲ್ಲಂಘಿಸಿ ಎಟಿಸಿಗೆ ನುಗ್ಗಿರುವುದು ಅಕ್ರಮ. ನಿಷೇಧವಿದ್ಧರೂ ವಿಮಾನ ಹಾರಾಟಕ್ಕೆ ಬಲವಂತವಾಗಿ ಅನುಮತಿ ಪಡೆದಿರುವುದು ಅಧಿಕಾರದ ಅಹಂಕಾರವನ್ನು ತೋರಿಸುತ್ತದೆ ಎಂದು ವಿಪಕ್ಷಗಳು ಟೀಕಿಸಿವೆ.

ಓದಿ:ರೈಲ್ವೆ ನಿಲ್ದಾಣದ ಹೊಸ ವಿನ್ಯಾಸದ ಫೋಟೋಸ್​ ವೈರಲ್​: ನೆಟಿಜನ್​ಗಳ ಪ್ರತಿಕ್ರಿಯೆ ಹೇಗಿದೆ ನೋಡಿ

ABOUT THE AUTHOR

...view details