ಕರ್ನಾಟಕ

karnataka

ETV Bharat / bharat

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ: ರೂಪದರ್ಶಿ ಗಂಭೀರ ಆರೋಪ - ಮಾಡೆಲ್ಸ್ ಸಂಸ್ಥೆ

ರಾಂಚಿಯ ಯಶ್ ಮಾಡೆಲ್ಸ್ ಸಂಸ್ಥೆಯ ನಿರ್ದೇಶಕ ತನ್ವೀರ್ ಅಖ್ತರ್ ಖಾನ್ ವಿರುದ್ಧ ಮತಾಂತರಗೊಳಿಸುವ ನಿಟ್ಟಿನಲ್ಲಿ ಬಲವಂತದ ಮದುವೆಗೆ ಒತ್ತಡ ಹೇರಿದ ಆರೋಪವನ್ನು ಮಾಡೆಲ್‌ವೊಬ್ಬರು​ ಮಾಡಿದ್ದಾರೆ.

ಮತಾಂತರಕ್ಕಾಗಿ ಬಲವಂತದ ಮದುವೆಗೆ ಒತ್ತಡ - ರೂಪದರ್ಶಿ ಆರೋಪ
Jharkhand Aspiring Mumbai model accuses Ranchi man of love jihad

By

Published : May 31, 2023, 2:27 PM IST

ರಾಂಚಿ (ಜಾರ್ಖಂಡ್):ವ್ಯಕ್ತಿಯೊಬ್ಬ ಮತಾಂತರಗೊಳಿಸುವ ನಿಟ್ಟಿನಲ್ಲಿ ತನ್ನನ್ನು ಒತ್ತಾಯಪೂರ್ವವಾಗಿ ಮದುವೆಯಾಗಲು ಪ್ರಯತ್ನಿಸಿದ್ದಾನೆ ಎಂದು ಮಹಾರಾಷ್ಟ್ರದ ಮುಂಬೈನ ಮೂಲದ ರೂಪದರ್ಶಿ ಆರೋಪಿಸಿದ್ದಾರೆ. ಈ ಸಂಬಂಧ ರಾಂಚಿಯ ಯಶ್ ಮಾಡೆಲ್ಸ್ ಸಂಸ್ಥೆಯ ನಿರ್ದೇಶಕ ತನ್ವೀರ್ ಅಖ್ತರ್ ಖಾನ್ ಎಂಬವರ ವಿರುದ್ಧ ಮುಂಬೈನಲ್ಲಿ ಪೊಲೀಸ್​ ಕೇಸ್​ ಸಹ ದಾಖಲಿಸಿದ್ದಾರೆ.

ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತ ರೂಪದರ್ಶಿ ಬಿಹಾರದ ಭಾಗಲ್ಪುರ ಮೂಲದವರು. ಈ ಹಿಂದೆ ಯಶ್ ಮಾಡೆಲ್​ ಇನ್‌ಸ್ಟಿಟ್ಯೂಟ್‌ನಲ್ಲಿ ಮಾಡೆಲಿಂಗ್ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಆರೋಪಿ ತನ್ವೀರ್ ಅಖ್ತರ್ ಖಾನ್​ ತನಗೆ ಕಿರುಕುಳ ನೀಡಿದ್ದಲ್ಲದೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ದೂರಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ವೀರ್ ಅಖ್ತರ್ ಖಾನ್ ಕಿರುಕುಳ ಕಾರಣ ಆ ಸಂಸ್ಥೆಯನ್ನು ತೊರೆದು ನೇರವಾಗಿ ಭಾಗಲ್ಪುರಕ್ಕೆ ಬಂದಿದ್ದೆ. ನಂತರದಲ್ಲಿ ಮಾಡೆಲಿಂಗ್​ ವೃತ್ತಿಜೀವನಕ್ಕಾಗಿ ಮುಂಬೈ ವರ್ಸೋವಾಕ್ಕೆ ಬಂದು ನೆಲೆಸಿದ್ದೇನೆ. ಆದರೆ, ತನ್ವೀರ್ ನಿರಂತರವಾಗಿ ಕಿರುಕುಳ ನೀಡುತ್ತಲೇ ಇದ್ದಾನೆ. ಅಷ್ಟೇ ಅಲ್ಲ, ಮುಂಬೈಗೂ ಆರೋಪಿ ಆಗಮಿಸಿ ಧರ್ಮ ಬದಲಾಯಿಸುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ. ಇದಕ್ಕೆ ನಾನು ಒಪ್ಪದ ಕಾರಣ ಕೊಲೆ ಮಾಡಲು ಸಹ ಪ್ರಯತ್ನಿಸಿದ್ದಾನೆ ಎಂದು ಮಾಡೆಲ್ ಆರೋಪಿಸಿದ್ದಾರೆ.

ಮುಂದುವರೆದು, ತನ್ವೀರ್ ಕುಟುಂಬದವರ ಒತ್ತಡಕ್ಕೆ ಮಣಿದು ಆತನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೆ. ಆದರೆ ಇದರ ಹೊರತಾಗಿಯೂ ಆತ ನಿರಂತರವಾಗಿ ಕಿರುಕುಳ ನೀಡುತ್ತಾ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ನನ್ನ ಕೆಲವು ಫೋಟೋಗಳನ್ನು ಎಡಿಟ್ ಮಾಡಿ ನನ್ನ ಸಂಬಂಧಿಕರಿಗೂ ಕಳುಹಿಸಿದ್ದಾನೆ. ಈ ಕುರಿತು ವರ್ಸೋವಾ ಠಾಣೆ ಪೊಲೀಸರಿಗೂ ದೂರು ನೀಡಿದ್ದೇನೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಆರೋಪಿ ತನ್ವೀರ್ ಈ ರೂಪದರ್ಶಿಯೇ ನನಗೆ ಮೋಸ ಮಾಡಿದ್ದಾಳೆ. ನನ್ನ ವ್ಯವಹಾರಕ್ಕೆ ನಷ್ಟವನ್ನುಂಟುಮಾಡಿದ್ದಾಳೆ ಎಂದು ಮರು ಆರೋಪ ಮಾಡಿದ್ದಾನೆ. ಆಕೆಯ ನನ್ನೊಂದಿಗೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಕೆಲ ಡೇಟಾ ಸಂಗ್ರಹಿಸಿ, ನನ್ನ ಸಂಸ್ಥೆಯ ವಿರುದ್ಧವೇ ಸಂಚು ರೂಪಿಸಿದ್ದಾಳೆ ಎಂದು ತನ್ವೀರ್ ಹೇಳಿದ್ದಾನೆ.

ಇದನ್ನೂ ಓದಿ:ಮ್ಯಾಟ್ರಿಮೋನಿ ನಂಟು, 2 ವರ್ಷದಿಂದ ಸಂಬಂಧ: ಯುವಕನ ವಿರುದ್ಧ ಯುವತಿ ದೂರು

ಮದುವೆ ಹೆಸರಲ್ಲಿ ಮೋಸ ಆರೋಪ:ಇತ್ತೀಚೆಗೆ ಬೆಂಗಳೂರಿನಲ್ಲಿ ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ ಮಾಡಿದ ಆರೋಪ ಪ್ರಕರಣ ಬೆಳಕಿಗೆ ಬಂದಿತ್ತು.ಈ ಬಗ್ಗೆ 27 ವರ್ಷದ ಯುವತಿಯೊಬ್ಬಳು ದೇವರ ಜೀವನಹಳ್ಳಿ ಪೊಲೀಸ್​ ಠಾಣೆಯಲ್ಲಿ ನೋಮಾನ್ ಷರೀಫ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಳು.

ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಷರೀಫ್ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಳು. 2021ರಲ್ಲಿ ಮದುವೆಗೆಂದು ಶಾದಿ ಡಾಟ್ ಕಾಮ್​ನಲ್ಲಿ ವರನ ಹುಡುಕಾಟ ಆರಂಭಿಸಿದ್ದಾಗ ಆರೋಪಿಯ ಪರಿಚಯವಾಗಿತ್ತು. ಇದರಿಂದ ಕಳೆದ ಎರಡು ವರ್ಷಗಳಿಂದ ಇಬ್ಬರು ನಡುವೆ ಸಂಪರ್ಕ ಬೆಳೆದಿತ್ತು. ನಂತರದಲ್ಲಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆದರೆ, ನಂತರದಲ್ಲಿ ತನ್ನಿಂದ ದೂರವಾಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಳು.

ಇದನ್ನೂ ಓದಿ:ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ; ನ್ಯಾಯಕ್ಕಾಗಿ ಪ್ರತಿಭಟನೆ

ABOUT THE AUTHOR

...view details