ಕರ್ನಾಟಕ

karnataka

By

Published : Apr 20, 2021, 4:02 PM IST

ETV Bharat / bharat

ಏ. 22ರಿಂದ 29ರವರೆಗೆ ಜಾರ್ಖಂಡ್​​ನಲ್ಲಿ ಲಾಕ್​ಡೌನ್​: ಸಿಎಂ ಮಹತ್ವದ ಘೋಷಣೆ

ಜಾರ್ಖಂಡ್​ನಲ್ಲಿ ಸದ್ಯ 30,477 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 2,467 ಕೋವಿಡ್​ ಕೇಸ್ ದಾಖಲಾಗಿವೆ.

Jharkhand government
Jharkhand government

ರಾಂಚಿ:ಕಳೆದ ಕೆಲ ದಿನಗಳಿಂದ ಎರಡನೇ ಹಂತದ ಕೋವಿಡ್ ಅಲೆ ಹೆಚ್ಚಾಗುತ್ತಿರುವ ಕಾರಣ ಜಾರ್ಖಂಡ್​​ನಲ್ಲಿ 8 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಏಪ್ರಿಲ್​ 22ರಿಂದ 29ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ.

ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್​ ಈ ಆದೇಶ ಹೊರಹಾಕಿದ್ದು, ಟ್ವೀಟರ್​ನಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲಿನ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಏಪ್ರಿಲ್​. 22ರ ಬೆಳಗ್ಗೆ 6 ಗಂಟೆಯಿಂದ ಏಪ್ರಿಲ್​ 29ರವರೆಗೆ ಬೆಳಗ್ಗೆ 6 ಗಂಟೆವರೆಗೆ ಈ ಲಾಕ್​ಡೌನ್​ ಜಾರಿಯಲ್ಲಿರುತ್ತದೆ.

ಲಾಕ್​ಡೌನ್ ಜಾರಿಗೊಂಡಿರುವ ಕಾರಣ ಜಾರ್ಖಂಡ್​ನಲ್ಲಿ ಎಲ್ಲ ಪರೀಕ್ಷೆ ಮುಂದೂಡಿಕೆ ಮಾಡಿ ಮಹತ್ವದ ಆದೇಶ ಹೊರಹಾಕಲಾಗಿದೆ. ಮದುವೆಯಲ್ಲಿ ಕೇವಲ 50 ಜನರು ಭಾಗಿಯಾಗಲು ಅವಕಾಶ ನೀಡಲಾಗಿದ್ದು, ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ಕೊರೊನಾ ಸೋಂಕು ದೃಢ

ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಒಂದು ವಾರಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಂಡಿವೆ. ಮಹಾರಾಷ್ಟ್ರದಲ್ಲಿ ಸೆಕ್ಷನ್​ 144 ಜಾರಿಯಲ್ಲಿದ್ದು, ಇಂದಿನಿಂದ ಮತ್ತಷ್ಟು ಕಠಿಣ ನಿಯಮ ಜಾರಿಗೊಂಡಿವೆ.

ABOUT THE AUTHOR

...view details