ಕರ್ನಾಟಕ

karnataka

ETV Bharat / bharat

ತಮ್ಮ ಉದಾರತೆಯಿಂದ ಬಾಲಕಿಯ ಪ್ರಾಣ ಉಳಿಸಿದ ನಟ ಸೋನು ಸೂದ್​ - ನಟ ಸೋನು ಸೂದ್​,

ಮತ್ತೊಮ್ಮೆ ನೆರವು ನೀಡಿರುವ ಬಾಲಿವುಡ್​ ನಟ, ರಿಯಲ್​ ಹೀರೋ ಸೋನು ಸೂದ್​ ಬಾಲಕಿಯೊಬ್ಬಳ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

jhansi-child-underwent-surgery-in-mumbai-sonu-sood-had-to-bear-the-cost-of-treatment
ತಮ್ಮ ಉದಾರತೆಯಿಂದ ಬಾಲಕಿಯ ಪ್ರಾಣ ಉಳಿಸಿದ ನಟ ಸೋನು ಸೂದ್​

By

Published : Feb 23, 2021, 8:13 AM IST

Updated : Feb 23, 2021, 8:31 AM IST

ಝಾನ್ಸಿ:ಹೃದಯರೋಗದಿಂದ ಬಳಲುತ್ತಿದ್ದ ಬಾಲಕಿಯ ನೆರವಿಗೆ ಸೋನು ಸೂದ್​ ಆಗಮಿಸಿದ್ದರಿಂದ ಆಕೆಯ ಪ್ರಾಣ ಉಳಿದಿದೆ.

ಉತ್ತರಪ್ರದೇಶದ ಝಾನ್ಸಿಯ ಶಿವಾಜಿ ನಗರದ ನಿವಾಸಿ 9 ವರ್ಷದ ಬಾಲಕಿ ಲಕ್ಕಿ ಹೃದಯ ರೋಗದಿಂದ ಬಳಲುತ್ತಿದ್ದಳು. ಲಕ್ಕಿಯ ತಂದೆ ಧರ್ಮೇಂದ್ರ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆ ಹಣ ಭರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಧರ್ಮೇಂದ್ರ ತಮ್ಮ ನೋವನ್ನು ಕೆಲ ಸಾಮಾಜಿಕ ಸಂಘಟನೆಗಳ ಮುಂದೆ ತೋಡಿಕೊಂಡಿದ್ದರು.

ತಮ್ಮ ಉದಾರತೆಯಿಂದ ಬಾಲಕಿಯ ಪ್ರಾಣ ಉಳಿಸಿದ ನಟ ಸೋನು ಸೂದ್​

ಸಾಮಾಜಿಕ ಸಂಘಟನೆಯೊಂದು ಲಕ್ಕಿ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಾಯಕ್ಕಾಗಿ ಮುಂದೆ ಬರುವಂತೆ ನಟ ಸೋನು ಸೂದ್​ ಸೇರಿದಂತೆ ಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಪೋಸ್ಟ್​ ನೋಡಿದ ಸೋನು ಸೂದ್ ಅವರ ಸಹಾಯಕ್ಕೆ ಕೂಡಲೇ ಮುಂದಾದರು. ಸೋನು ಸೂದ್ ಅವರ ವ್ಯವಸ್ಥಾಪಕರು ಈ ಕುಟುಂಬವನ್ನು ಸಂಪರ್ಕಿಸಿ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಚಿಕಿತ್ಸೆ ನೀಡಿ ಅದರ ಖರ್ಚ್​ನ್ನು ಭರಿಸಿದರು.

ತಮ್ಮ ಉದಾರತೆಯಿಂದ ಬಾಲಕಿಯ ಪ್ರಾಣ ಉಳಿಸಿದ ನಟ ಸೋನು ಸೂದ್​

ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಲಕ್ಕಿ ಕುಟುಂಬ ಮುಂಬೈನಿಂದ ಝಾನ್ಸಿಗೆ ತೆರಳಿದೆ. ಝಾನ್ಸಿಯ ಸಾಮಾಜಿಕ ಸಂಸ್ಥೆಗಳು ಬಾಲಕಿಯ ಸಹಾಯಕ್ಕಾಗಿ ಮುಂದೆ ಬಂದ ಸೋನು ಸೂದ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸೋನು ಸೂದ್ ಟ್ವೀಟ್ ಮಾಡಿ ಸಿಹಿತಿಂಡಿಗಳನ್ನು ತಿನ್ನುವ ಬಗ್ಗೆ ಬರೆದಿದ್ದಾರೆ.

Last Updated : Feb 23, 2021, 8:31 AM IST

ABOUT THE AUTHOR

...view details