ಕರ್ನಾಟಕ

karnataka

ETV Bharat / bharat

ಕೇಂದ್ರ-ರಾಜ್ಯ ಸರ್ಕಾರಗಳಿಂದ ಹಲವು ಪ್ರಶಸ್ತಿ ಬಾಚಿಕೊಂಡ ಗುಜರಾತ್‌ನ ಮಾದರಿ ಗ್ರಾಮ

ಗುಜರಾತ್‌ನ ಜೆಥಿಪುರ ಮಾದರಿ ಗ್ರಾಮವೆಂದೇ ಪ್ರಸಿದ್ಧಿ ಪಡೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ.

Jethipura
ಗುಜರಾತ್‌ನ ಜೆಥಿಪುರ

By

Published : Apr 11, 2023, 11:31 AM IST

ಸಬರಕಾಂತ (ಗುಜರಾತ್):ಗುಜರಾತಿನ ಸಬರಕಾಂತದ ಇದಾರ್ ತಾಲೂಕಿನಿಂದ 17 ಕಿ.ಮೀ ಮತ್ತು ಹಿಮ್ಮತ್‌ ನಗರದಿಂದ 28 ಕಿಮೀ ದೂರದಲ್ಲಿರುವ ಜೆಥಿಪುರ ಮಾದರಿ ಗ್ರಾಮ ಎನಿಸಿಕೊಂಡಿದೆ. ಸ್ವಚ್ಛತೆ, ಟೆಕ್ ಲೈಬ್ರರಿ, ಉನ್ನತ ದರ್ಜೆಯ ಸೌಕರ್ಯಗಳು, ಒಳಚರಂಡಿ ವ್ಯವಸ್ಥೆ, ತಳಮಟ್ಟದಲ್ಲಿ ಉತ್ತಮ ಆಡಳಿತ, ಹಸಿರೀಕರಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಇದಲ್ಲದೇ ಈ ಗ್ರಾಮವು ಎರಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು, ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ, ಗ್ರಾಮಸಭಾ ಪ್ರಶಸ್ತಿ ಮತ್ತು ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸಬಲೀಕರಣ ಪ್ರಶಸ್ತಿಯನ್ನು ಗೆದ್ದಿದೆ. ಪ್ರಸಿದ್ಧ ದೂರದರ್ಶನದ ಹಾಸ್ಯ ಧಾರಾವಾಹಿ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ'ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಈ ಗ್ರಾಮವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಒಪ್ಪಿಗೆ ಮೇರೆಗೆ ಸರಪಂಚರರ ಆಯ್ಕೆ:ಮಾದರಿ ಗ್ರಾಮ ಜೆಥಿಪುರದಲ್ಲಿ 1,300 ಜನಸಂಖ್ಯೆ ಇದೆ. ಈ ಆದರ್ಶ ಊರಿನಲ್ಲಿ ಕಳೆದ 15 ವರ್ಷಗಳಿಂದ ಸರಪಂಚ್ (ಗ್ರಾಮ ಮುಖ್ಯಸ್ಥ) ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಪರಸ್ಪರ ಒಪ್ಪಿಗೆ ಮೇರೆಗೆ ಸರಪಂಚರನ್ನು ಆಯ್ಕೆ ಮಾಡಲಾಗುತ್ತದೆ. ಗ್ರಾಮದ ಸರಪಂಚ ಭಟ್ ಅಹಸನ್ ಅಲಿ ಮಾತನಾಡಿ, 'ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಸರಪಂಚ್ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಸರಪಂಚ್ ಜವಾಬ್ದಾರಿಯನ್ನು ಯಾರು ಸ್ವೀಕರಿಸಲು ಸಿದ್ಧರಿದ್ದಾರೊ ಅವರಿಗೆ ಅಧಿಕಾರ ಹಸ್ತಾಂತರಿಸುತ್ತೇವೆ. ನಮ್ಮ ಗ್ರಾಮ ಸುಸಜ್ಜಿತವಾಗಿದೆ. ಸಿಸಿಟಿವಿ, ಶುದ್ಧ ಕುಡಿಯುವ ನೀರು ಒದಗಿಸಲು ವೆಂಡಿಂಗ್ ಮಷಿನ್‌ಗಳು, ಒಳಚರಂಡಿ ಮಾರ್ಗಗಳು, ಆಧುನಿಕ ಗ್ರಂಥಾಲಯ ಮತ್ತು ಆಸ್ಪತ್ರೆ, ಬೀದಿ ದೀಪ ವ್ಯವಸ್ಥೆ ಮತ್ತು ಪೈಪ್‌ಲೈನ್ ನೀರು ಸರಬರಾಜು" ವ್ಯವಸ್ಥೆ ಉತ್ತಮವಾಗಿದೆ ಎಂದರು.

"ಈ ಗ್ರಾಮದ ಜನರು ಸ್ವಚ್ಛತೆಯ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಗ್ರಾಮವು ಕೊಳಕು ಮತ್ತು ಕಸದಿಂದ ಮುಕ್ತವಾಗಿದೆ. ನಮ್ಮ ಗ್ರಾಮದ ಶಾಲೆಯು ಎ ಗ್ರೇಡ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಎರಡು ರಾಷ್ಟ್ರೀಯ ಪ್ರಶಸ್ತಿಗಳ ಜತೆಗೆ ಒಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಪಂಚಾಯತ್ ಪ್ರಶಸ್ತಿ ಮತ್ತು ಇನ್ನೊಂದು ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ ಪಡೆದುಕೊಂಡಿದೆ" ಎಂದು ಅವರು ತಿಳಿಸಿದರು.

ಈ ಹಳ್ಳಿಯಲ್ಲಿ ಮತ ತಪ್ಪಿಸುವಂತಿಲ್ಲ:ಚುನಾವಣೆ ಅಂದಮೇಲೆ ರಾಜಕೀಯ ಪಕ್ಷಗಳ ಭರಾಟೆ, ಅಬ್ಬರದ ಪ್ರಚಾರ ಎಲ್ಲವೂ ಸರ್ವೇಸಾಮಾನ್ಯ. ನಗರ, ಗ್ರಾಮಗಳಿಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಾರೆ. ಸಾಧ್ಯ, ಅಸಾಧ್ಯಗಳ ಬಿಟ್ಟಿ ಭರವಸೆಯನ್ನಂತೂ ಕೊಟ್ಟೇ ಕೊಡ್ತಾರೆ. ಇಂತಹ ರಾಜಕೀಯ ಪ್ರಚಾರವನ್ನು ಗುಜರಾತ್​ನ ರಾಜ್​ಕೋಟ್​ ನಗರದಿಂದ 20 ಕಿಲೋ ಮೀಟರ್​ ದೂರವಿರುವ ರಾಜ್​ ಸಮಾಧಿಯಾಲ ಹಳ್ಳಿಯಲ್ಲಿ 40 ವರ್ಷಗಳಿಂದ ನಿಷೇಧಿಸಲಾಗಿದೆ. ಯಾವುದೇ ಪಕ್ಷಗಳು ಇಲ್ಲಿ ಪ್ರಚಾರ ಮಾಡುವಂತಿಲ್ಲ. ವಿಶೇಷ ಅಂದ್ರೆ ಇಲ್ಲಿನ ಜನರು ಕಡ್ಡಾಯ ಮತದಾನ ಮಾಡಬೇಕು. ಇಲ್ಲವಾದಲ್ಲಿ ದಂಡ ಕಟ್ಟಲೇಬೇಕು.

ಇದನ್ನೂ ಓದಿ:ಗುಜರಾತ್​ನ ಈ ಹಳ್ಳಿಯಲ್ಲಿ ಪ್ರಚಾರ ಮಾಡುವಂತಿಲ್ಲ, ಮತ ತಪ್ಪಿಸುವಂತಿಲ್ಲ: ಹೀಗೊಂದು ಮಾದರಿ ಗ್ರಾಮ

ABOUT THE AUTHOR

...view details