ಕರ್ನಾಟಕ

karnataka

ETV Bharat / bharat

ಜೆಸ್ನಾ ಮಾರಿಯಾ ನಾಪತ್ತೆ ಪ್ರಕರಣ; ಸಿಬಿಐ ತನಿಖೆಗೆ ಹೈಕೋರ್ಟ್​ ಆದೇಶ

ಜೆಸ್ನಾ ಮಾರಿಯಾ (22) ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಆದೇಶಿಸಿರುವ ಕೇರಳ ಹೈಕೋರ್ಟ, ತನಿಖೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Jesna Maria missing case handed over to CBI
ಜೆಸ್ನಾ ಮಾರಿಯಾ

By

Published : Feb 19, 2021, 4:11 PM IST

ಎರ್ನಾಕುಲಂ(ಕೇರಳ) :ಜೆಸ್ನಾ ಮಾರಿಯಾ (22) ನಾಪತ್ತೆಯಾದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ.

ಜೆಸ್ನಾ ಸಹೋದರ ಜೈಸ್ ಜಾನ್ ಮತ್ತು ಕೇರಳ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಕೆ.ಎಂ. ಅಭಿಜಿತ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್​ ಈ ಆದೇಶ ಹೊರಡಿಸಿದೆ. ತನಿಖೆಯನ್ನು ವಹಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಸಿಬಿಐ ಈಗಾಗಲೇ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಈ ಪ್ರಕರಣವನ್ನು ಸಿಬಿಐನ ತಿರುವನಂತಪುರಂ ಘಟಕ ತನಿಖೆ ನಡೆಸಲಿದ್ದು, ಸಿಬಿಐ ಅಪರಾಧ ವಿಭಾಗವು ಈಗಾಗಲೇ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈ ನಿಟ್ಟಿನಲ್ಲಿ ತನಿಖೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಓದಿ:ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮಗಳು.. ಮದ್ರಾಸ್ ಹೆಚ್​​ಸಿ ನೋಟಿಸ್

ಮಾರ್ಚ್ 22, 2018 ರಂದು ಪಥನಮ್​ತ್ತಿಟ್ಟ ವೆಚೂಚಿರಾದ ಸಂತೋಷ್ ಕವಾಲಾದಲ್ಲಿರುವ ತನ್ನ ಮನೆಯಿಂದ ಹೊರಹೋಗಿದ್ದ ಯುವತಿ ನಾಪತ್ತೆಯಾಗಿದ್ದಳು. ಈ ಸಂಬಂಧ ಜೆಸ್ನಾಳ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆದರೆ, ಮೂರು ವರ್ಷಗಳ ನಂತರವೂ ಆಕೆ ಪತ್ತೆಯಾಗಿಲ್ಲ.

ABOUT THE AUTHOR

...view details