ಲಖನೌ, ಉತ್ತರಪ್ರದೇಶ:ಕುಖ್ಯಾತ ಪಾತಕಿ ಸಂಜೀವ್ ಮಹೇಶ್ವರಿ ಅಲಿಯಾಸ್ ಜೀವಾ ಎಂಬಾತನನ್ನು ಹರಿದ್ವಾರದ ಆಸ್ತಿ ಡೀಲರ್‌ನ ಜಮೀನು ಕಬಳಿಸಲು ಯತ್ನಿಸುತ್ತಿದ್ದಾಗ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರು ಮತ್ತು ಎಸ್‌ಐಟಿ ತಂಡ ಬಹಿರಂಗ ಪಡಿಸಿದೆ. ಮಾಫಿಯಾ ಬದನ್ ಸಿಂಗ್ ಬಡ್ಡೋಗೆ ಪ್ರಾಪರ್ಟಿ ಡೀಲರ್ ಆಪ್ತನಾಗಿದ್ದ ಎಂಬ ವಿಷಯವೂ ತಿಳಿದುಬಂದಿದೆ.
ಜೀವಾ ಮತ್ತು ಆತನ ಆಪ್ತರು 50 ಕೋಟಿ ಮೌಲ್ಯದ ಭೂಮಿಯನ್ನು ಕಬಳಿಸಲು ಬಯಸಿದ್ದರು. ಈ ಕಾರಣಕ್ಕಾಗಿ ಆಸ್ತಿ ಡೀಲರ್ ಕೊಲ್ಲಲ್ಪಟ್ಟರು. ಆಪ್ತ ಆಸ್ತಿ ಡೀಲರ್ ಕೊಲೆಯಾದ ನಂತರ ಬದನ್ ಸಿಂಗ್ ಬಡ್ಡೋ ಮತ್ತು ಜೀವಾ ನಡುವೆ ದ್ವೇಷ ಉಲ್ಭಣಗೊಂಡಿತ್ತು.
ಆರು ವರ್ಷಗಳ ಹಿಂದೆ ನಡೆದಿದ್ದ ಕೊಲೆ: ಹೌದು, ಆರು ವರ್ಷಗಳ ಹಿಂದೆ ಹರಿದ್ವಾರದಲ್ಲಿ ಉದ್ಯಮಿ ಅಮಿತ್ ದೀಕ್ಷಿತ್ ಅವರನ್ನು ರಾಜಧಾನಿ ಲಖನೌದ ನ್ಯಾಯಾಲಯದ ಆವರಣದಲ್ಲಿ ಜೀವಾ ತನ್ನ ಹಿಂಬಾಲಕರೊಂದಿಗೆ ಸೇರಿ ಕೊಲೆ ಮಾಡಿದ್ದ. ಜೀವಾ ವಿರುದ್ಧ ಹರಿದ್ವಾರದಲ್ಲಿ ಕೊಲೆ ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಜೀವಾ ಜೈಲು ಸೇರಿದ್ದ.
ತನ್ನ ಆಪ್ತ ಕೊಲೆಯಿಂದ ಬೇಸತ್ತಿದ್ದ ಬದನ್ ಸಿಂಗ್ ಬಡ್ಡೋ ಸಂಜೀವ್ ಮಹೇಶ್ವರಿ ಜೀವಾನನ್ನು ಕೊಲೆ ಮಾಡಲು ಯೋಜಿಸುತ್ತಿದ್ದನು. ಆದರೆ, ಸಂಜೀವ್ ಮಹೇಶ್ವರಿ ಜೀವಾ ಜೈಲಿನಲ್ಲಿರುವ ಕಾರಣ ಅವನಿಗೆ ಅವಕಾಶ ಸಿಗಲಿಲ್ಲ. ಸ್ನೇಹಿತನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾಫಿಯಾ ಬದನ್ ಸಿಂಗ್ ಬಡ್ಡೋ ಯೋಜನೆ ರೂಪಿಸಿದ್ದ. ಈತ ಜೌನಪುರದ ಕೆರಕಟ್ ನಿವಾಸಿ ವಿಜಯ್ ಯಾದವ್ ಎಂಬಾತನಿಗೆ ಜೀವಾನನ್ನು ಕೊಲ್ಲುವ ಗುತ್ತಿಗೆ ನೀಡಿದ್ದ ಎಂಬುದು ತನಿಖೆ ಮೂಲಕ ತಿಳಿದುಬಂದಿದೆ.
ಬದನ್ ಸಿಂಗ್ ಬಡ್ಡೋ ಸಂಪೂರ್ಣ ಯೋಜನೆ ಸಿದ್ಧಪಡಿಸಿದ್ದ. ನ್ಯಾಯಾಲಯದ ಆವರಣದಲ್ಲಿ ಸಂಜೀವ್ ಮಹೇಶ್ವರಿ ಜೀವಾ ಬಂದಿರುವ ಬಗ್ಗೆ ಬದನ್ ಸಿಂಗ್ ಮಾಹಿತಿ ಪಡೆದಿದ್ದನು. ಬಳಿಕ ಜೂನ್ 7ರಂದು ಹಳೆ ಹೈಕೋರ್ಟ್ ಆವರಣದಲ್ಲಿ ಸಂಜೀವ್ ಮಹೇಶ್ವರಿ ಜೀವಾನನ್ನು ಕೊಲೆ ಮಾಡಲಾಗಿತ್ತು. ಘಟನೆಯ ಸಂದರ್ಭದಲ್ಲಿಯೇ ಪೊಲೀಸರು ಜಾನ್‌ಪುರ ಶೂಟರ್ ವಿಜಯ್ ಯಾದವ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈಗ ಈ ಸಂಪೂರ್ಣ ಪ್ರಕರಣವನ್ನು ಎಸ್‌ಐಟಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ವಿಜಯ್ನ ಸಹಚರನ ಶೋಧ: ಲಖನೌದಲ್ಲಿ ವಿಜಯ್ ಯಾದವ್‌ಗೆ ಸಹಾಯ ಮಾಡಿದ ಸಹಚರನನ್ನು ಪೊಲೀಸರು ಮತ್ತು ಎಸ್‌ಐಟಿ ತಂಡಗಳು ಹುಡುಕುತ್ತಿವೆ. ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಇವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದ್ದು, ಎಸ್‌ಐಟಿ ತಂಡ ಮುಂದಿನ ಕ್ರಮ ಕೈಗೊಂಡಿದೆ.
ಓದಿ:Building collapse: 3 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಸಾವು.. 12 ಮಂದಿ ರಕ್ಷಣೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ