ಗೋವಾದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇತ್ತೀಚೆಗೆ ನೀಡಿದ್ದ ಆ ಒಂದು ಹೇಳಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ತಡರಾತ್ರಿಯಾದರೂ ಹುಡುಗಿಯರು ಮನೆಯಿಂದ ಬೀಚ್‌ನಲ್ಲಿರುತ್ತಾರೆ. ಮಕ್ಕಳನ್ನು ರಕ್ಷಿಸುವುದು ಪೋಷಕರ ಜವಾಬ್ದಾರಿ ಎಂದು ಹೇಳಿದ್ದರು.
ಅಂದಹಾಗೆ ಮಹಿಳೆಯರ ಬಗ್ಗೆ ಇಂಥ ಹೇಳಿಕೆ ನೀಡುವ ನಾಯಕ ಇವರೇ ಮೊದಲಿಗರಲ್ಲ. ಇಂತಹ ಹಲವಾರು ನಾಯಕರು ಹೆಣ್ಣು ಮಕ್ಕಳ ಬಗ್ಗೆ, ಅವರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಅಸಂಬದ್ಧ ಮಾತುಗಳನ್ನಾಡಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ.
1. ತೀರಥ್ ಸಿಂಗ್ ರಾವತ್
ಉತ್ತರಾಖಂಡದ ತೀರಥ್ ಸಿಂಗ್ ರಾವತ್ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಂಡ ಕೂಡಲೇ ಮಹಿಳೆಯರು ಧರಿಸುವ ಬಟ್ಟೆಗಳ ಬಗ್ಗೆ ಮಾತನಾಡಿದ್ದರು. ಹೆಣ್ಣುಮಕ್ಕಳು ರಿಪ್ಪಡ್ ಜೀನ್ಸ್ (ಹರಿದ ಪ್ಯಾಂಟ್) ಬಗ್ಗೆ ಮಾತನಾಡಿ, ಮುಜುಗರಕ್ಕೀಡಾಗಿದ್ದರು. ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೊಳಗಾದರು.
2. ಮೀನಾ ಕುಮಾರಿ
ಉತ್ತರಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ, ಸಮಾಜದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಸಮಾಜವೇ ಗಂಭೀರವಾಗಿರಬೇಕು. ಇಂತಹ ಸಂದರ್ಭಗಳಲ್ಲಿ ಮೊಬೈಲ್ ದೊಡ್ಡ ಸಮಸ್ಯೆಯಾಗಿದೆ. ಹುಡುಗಿಯರು ಮೊಬೈಲ್‌ನಲ್ಲಿ ಹುಡುಗರೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಾರೆ. ಕುಟುಂಬಸ್ಥರು ಅವರ ಮೊಬೈಲ್ಗಳನ್ನು ಪರಿಶೀಲಿಸಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಾ ಅವರೊಂದಿಗೆ ಸಂಬಂಧ ಬೆಳೆಸಿ, ಅವರ ಜತೆ ಓಡಿ ಹೋಗುತ್ತಾರೆ ಎಂದಿದ್ದರು.
3. ಮುಲಾಯಂ ಸಿಂಗ್ ಯಾದವ್
ಅತ್ಯಾಚಾರ ಪ್ರಕರಣಗಳಲ್ಲಿ ಕಾನೂನು ಬದಲಾವಣೆಗಳನ್ನು ಬೆಂಬಲಿಸಿ ಮುಲಾಯಂ ಸಿಂಗ್ ಯಾದವ್ ರ್ಯಾಲಿ ನಡೆಸಿದ್ದರು. ಈ ವೇಳೆ ಮಾತನಾಡುತ್ತಾ, ಹುಡುಗರು-ಹುಡುಗಿಯರ ನಡುವೆ ಭಿನ್ನಾಭಿಪ್ರಾಯವಿದ್ದಾಗ ಹುಡುಗಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳುತ್ತಾಳೆ. ನಂತರ ಆ ಹುಡುಗನಿಗೆ ಮರಣದಂಡನೆ ವಿಧಿಸಲಾಗುತ್ತದೆ. ಅತ್ಯಾಚಾರ ಮಾಡಿದ್ದಕ್ಕಾಗಿ ಆತನನ್ನು ಗಲ್ಲಿಗೇರಿಸಲಾಗುತ್ತದೆಯೇ ಎಂದು ಕುಹಕವಾಡಿದ್ದರು.
4. ಶರದ್ ಯಾದವ್
1997 ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚಿಸಬೇಕಾದರೆ ಶರದ್ ಯಾದವ್, ಮಹಿಳಾ ಮೀಸಲಾತಿ ಅಂಗೀಕರಿಸುವ ಮೂಲಕ ಮಹಿಳೆಯರ ಸದನವನ್ನು ಮಾಡಲು ಹೊರಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಶರದ್ ಯಾದವ್ ಅವರ ಈ ಹೇಳಿಕೆಗೆ ಅನೇಕ ಪ್ರತಿಭಟನೆಗಳೇ ನಡೆದವು. ಬಳಿಕ ಅವರು ಮಹಿಳೆಯರ ಕ್ಷಮೆಯಾಚಿಸಿದರು. ಅದೇ ಯಾದವ್, 2017 ರಲ್ಲಿ ಹೆಣ್ಣಮಕ್ಕಳಿಗಿಂತ ಮತಗಳಿಗೆ ಗೌರವ ಜಾಸ್ತಿ. ಮಗಳ ಮಾನ ಹೋದರೆ, ಹೆತ್ತವರು ಹಾಗೂ ಊರಿನ ಮಾನ ಮಾತ್ರ ಹೋಗುತ್ತದೆ. ಒಮ್ಮೆ ಮತದಾನ ಮಾರಾಟವಾದ್ರೆ, ದೇಶದ ಗೌರವವೇ ಕಳೆದು ಹೋಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
5. ಕೈಲಾಶ್ ವಿಜಯವರ್ಗಿಯಾ
ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ, ಮಹಿಳೆಯರು ಮಿತವಾಗಿ ಮೇಕಪ್ ಮಾಡಬೇಕು. ಕೆಲವೊಮ್ಮೆ ನೀವು ಧರಿಸುವ ಬಟ್ಟೆ, ಮಾಡುವ ಮೇಕಪ್ ಎದುರಿಗಿರುವ ವ್ಯಕ್ತಿಯನ್ನು ಉದ್ರೇಕಗೊಳಿಸುತ್ತದೆ. ಮಹಿಳೆಯರು ಲಕ್ಷ್ಮಣ ರೇಖೆ ಹಾಕಿಕೊಳ್ಳುವುದು ಉತ್ತಮ. ಅವರು ತಮ್ಮ ವ್ಯಾಪ್ತಿ ಮೀರಿದರೆ, ರಾವಣನಂಥವರು ಸೀತೆಯಂತವರನ್ನು ಅಪಹರಿಸುತ್ತಾರೆ ಎಂದಿದ್ದರು.
6. ದಿಗ್ವಿಜಯ್ ಸಿಂಗ್