ನವದೆಹಲಿ:ಎಂಜಿನಿಯರಿಂಗ್ ಕೋರ್ಸ್ಗೆ ಪ್ರವೇಶ ಪರೀಕ್ಷೆಯಾದ ಜೆಇಇ-ಮುಖ್ಯ ಪರೀಕ್ಷೆಯ ಮೂರನೇ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, 17 ಮಂದಿ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಸ್ಕೋರ್ ಮಾಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಘೋಷಿಸಿದೆ.
ಕರ್ನಾಟಕದ ಗೌರಬ್ ದಾಸ್, ಆಂಧ್ರಪ್ರದೇಶದ ಕರ್ಣಮ್ ಲೋಕೇಶ್, ದುಗ್ಗಿನೇನಿ ವೆಂಕಟ ಪನೀಶ್, ಪಸಾಲ ವೀರ ಶಿವ ಮತ್ತು ಕಾಂಚನಪಲ್ಲಿ ರಾಹುಲ್ ನಾಯ್ಡು, ಬಿಹಾರದ ವೈಭವ ವಿಶಾಲ್, ರಾಜಸ್ಥಾನದ ಅನ್ಶುಲ್ ವರ್ಮಾ, ದೆಹಲಿಯ ರುಚಿರ್ ಬನ್ಸಾಲ್, ಪ್ರವಾರ್ ಕಟಾರಿಯಾ, ಹರಿಯಾಣದ ಹರ್ಷ್ ಮತ್ತು ಅನ್ಮೋಲ್, ತೆಲಂಗಾಣದ ಪೊಲು ಲಕ್ಷ್ಮೀ ಸಾಯಿ ಲೋಕೇಶ್ ರೆಡ್ಡಿ, ಮಧುರ್ ಆದರ್ಶ್ ರೆಡ್ಡಿ ಮತ್ತು ವೆಲವಲಿ ವೆಂಕಟ ಮತ್ತು ಉತ್ತರ ಪ್ರದೇಶದಿಂದ ಪಾಲ್ ಅಗರ್ವಾಲ್ ಮತ್ತು ಅಮಯ್ಯ ಸಿಂಘಾಲ್ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ಬಹ್ರೇನ್, ಕೊಲಂಬೊ, ದೋಹಾ, ದುಬೈ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮಸ್ಕಟ್, ರಿಯಾದ್, ಶಾರ್ಜಾ, ಸಿಂಗಪುರ್ ಮತ್ತು ಕುವೈತ್ ಸೇರಿದಂತೆ ಭಾರತದ ಹೊರಗಿನ 12 ನಗರಗಳು ಸೇರಿದಂತೆ ಒಟ್ಟು 334 ನಗರಗಳಲ್ಲಿನ ಒಟ್ಟು 7.09 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದರು.